Posts

Showing posts from 2014

ಮಗು ತಂದು ಕೊಡುವ ಸಂತಸ

ನಾನು ಬ್ಲಾಗ್ ಮಾಡಿ ತುಂಬ ದಿನ ಆಯಿತು.ಅದಕ್ಕೆ ನನ್ನ ಸೋಮಾರಿತನ ಕೂಡ ಕಾರಣವಿರಬಹುದು.ಆದರೆ ಮತ್ತೆ ಬರೆಯುವ ಮನಸ್ಸು ಮಾಡಿರುವುದು ಸಂತೋಷ ಕೊಡುತ್ತಿದೆ ಮತ್ತು ಅದು ನನ್ನ ಮಾತ್ರು ಭಾಷೆ ಕನ್ನಡದಲ್ಲಿ ಬರೀತಾ ಇರುವುದು ಇನ್ನು ಸಂತೋಷ ಕೊಡುತ್ತಿದೆ.ಇಷ್ಟು ದಿನ ನಾನು ಬರೆದಿರುವುದೆಲ್ಲ ನನ್ನದಲ್ಲದ ಭಾಷೆ ಮತ್ತು ಪ್ರಪಂಚದ ಬಹು ಜನರು ಮಾತಾಡುವ ಭಾಷೆ ಆಗಿರುವ ಇಂಗ್ಲಿಷ್ ಭಾಷೆಯಲ್ಲಿ. 25th ನವೆಂಬರ್, 2013 , ನಾನು ಮರೆಯಲಾಗದ ದಿನ ನನ್ನ ಜೀವನದಲ್ಲಿ. ಸಂಜೆ ಸುಮಾರು 5 :40 ಸಮಯ ನನ್ನ ಮಗಳ ಜನನ ಆಯಿತು. ಹುಟ್ಟಿದ ಆ ಮರುಕ್ಷಣದ ಅವಳ ಆ ಅಳು ಈಗಲೂ ನನ್ನ ಕಿವಿಯಲ್ಲಿ ಮಾರ್ದನಿಸುತ್ತಿದೆ. ನನ್ನ ಜೀವನದಲ್ಲಿ ಸಾಕಷ್ಟು ಸಂತೋಷದ ದಿನಗಳನ್ನು ಕಂಡಿದ್ದೇನೆ. ನಾನು ಕೆಲಸಕ್ಕೆ ಸೇರಿದ ದಿನ, ನನ್ನ ತಂದೆ ಮತ್ತು ತಾಯಿಗೆ ನನ್ನ ದುಡಿಮೆ ಇಂದ ಆದ ಸಂತೋಷದ  ದಿನಗಳು ಮತ್ತು ನಾನು ಮದುವೆ ಆದ ದಿನ. ಇವೆಲ್ಲ ನನಗೆ ಸಂತೋಷ ಕೊಟ್ಟ ದಿನಗಳೇ.ಆದರೆ ಒಂದು ಮಗು ಕೊಡುವ ಸಂತಸ, ಈ ಎಲ್ಲ ಸಂತೋಷಗಳಿಗಿಂತ  ದೊಡ್ಡದು.