Posts

Showing posts from 2020

ಕರ್ನಾಟಕ ಕ್ರಿಕೆಟ್

Image
ಭಾರತೀಯ ಕ್ರಿಕೆಟ್‌ಗೆ ಕರ್ನಾಟಕದ ಅಪ್ರತಿಮ ಕೊಡುಗೆ ಭಾರತೀಯ ಕ್ರಿಕೆಟ್‌ನಲ್ಲಿ ಕರ್ನಾಟಕದ ಪಾತ್ರ ಅಸಾಧಾರಣ. ಮುಂಬೈ ಮತ್ತು ದೆಹಲಿ ನಂತರ ಅತಿ ಹೆಚ್ಚು ಅಂತರರಾಷ್ಟ್ರೀಯ ಆಟಗಾರರನ್ನು ನೀಡಿರುವ ರಾಜ್ಯವೆಂದರೆ ಅದು ಕರ್ನಾಟಕ. ಮುಂಬೈ ಸಚಿನ್ ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ ಅಂತಹ ಸಾರ್ವಕಾಲಿಕ ಶ್ರೇಷ್ಠ ಆಟಗಾರರನ್ನು ನೀಡಿದೆ. ಅತಿ ಹೆಚ್ಚು ಬಾರಿ ರಣಜಿ ಟ್ರೋಫಿ ಗೆದ್ದು ಕ್ರಿಕೆಟ್ ಲೋಕದಲ್ಲಿ ತನ್ನದೇ ಆದ ಪ್ರಭಾವ ಮೂಡಿಸಿದೆ. ದೆಹಲಿ ಬಿಷನ್ ಸಿಂಗ್ ಬೇಡಿ, ವಿರಾಟ್ ಕೊಹ್ಲಿ ಮತ್ತು ವೀರೇಂದ್ರ ಸೆಹವಾಗ್ ಮೊದಲಾದ ತಾರೆಗಳನ್ನು ಭಾರತಕ್ಕೆ ಕೊಟ್ಟಿದೆ. ಆದರೆ ಕರ್ನಾಟಕ ವಿಭಿನ್ನ ಶೈಲಿ ಮತ್ತು ವಿಶಿಷ್ಟ ಪ್ರತಿಭೆಗಳ ಆಟಗಾರರನ್ನು ಭಾರತಕ್ಕೆ ಕೊಡುಗೆಯಾಗಿ ನೀಡಿದೆ. ಕ್ಲಾಸಿಕಲ್ ಆಫ್ ಸ್ಪಿನ್ನರ್ ಎರಪಳ್ಳಿ ಪ್ರಸನ್ನ , ಗೂಗ್ಲಿ ಸ್ಪೆಷಲಿಸ್ಟ್ ಭಗವತ್ ಚಂದ್ರಶೇಖರ್ , ಕಲಾತ್ಮಕ ಬ್ಯಾಟ್ಸಮನ್ ಗುಂಡಪ್ಪ ವಿಶ್ವನಾಥ್ , ವಿಶ್ವಶ್ರೇಷ್ಠ ವಿಕೆಟ್ ಕೀಪರ್ ಸಯ್ಯದ್ ಕಿರ್ಮಾನಿ , ಮೈಸೂರಿನ ಎಕ್ಸ್‌ಪ್ರೆಸ್ ಜಾವಗಲ್ ಶ್ರೀನಾಥ್ , ಭಾರತದ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಅನಿಲ್ ಕುಂಬ್ಳೆ , ಹಾಗೂ ಭಾರತದ ತಡೆಗೋಡೆ ರಾಹುಲ್ ದ್ರಾವಿಡ್ — ಇಂತಹ ಪ್ರತಿಭಾವಂತ ಆಟಗಾರರ ರಾಜ್ಯ ಕರ್ನಾಟಕ. ಮುಂಬೈ ನಂತರ ಅತಿ ಹೆಚ್ಚು ಬಾರಿ ರಣಜಿ ಟ್ರೋಫಿ ಗೆದ್ದ ಹೆಗ್ಗಳಿಕೆ ಕರ್ನಾಟಕ ತಂಡದ್ದು. ವಿಶ್ವನಾಥ್, ಕುಂಬ್ಳೆ ಮತ್ತು ದ್ರಾವಿಡ್ — ಇವರು ಭಾರತದ ನಾಯಕರಾಗಿ...

ಕನ್ನಡದಲ್ಲಿ ಬಯೋಪಿಕ್ ಬರಲಿ.

Image
  ಕನ್ನಡದಲ್ಲಿ ಶಕುಂತಲಾ ದೇವಿಯ ಬಯೋಪಿಕ್ ಏಕೆ ಬಂದಿಲ್ಲ?! ವಿಶ್ವವಿಖ್ಯಾತ ಗಣಿತಜ್ಞೆ ಶಕುಂತಲಾ ದೇವಿ ಕುರಿತಾದ ಹಿಂದಿ ಸಿನಿಮಾ ಇತ್ತೀಚಿಗೆ ಅಮೆಜಾನ್ ಪ್ರೈಮ್ ‌ನಲ್ಲಿ ಬಿಡುಗಡೆಯಾಗಿದೆ! ಆದರೆ ಯೋಚಿಸಿ ನೋಡಿ — ಈ ಸಿನೆಮಾವನ್ನು ನಮ್ಮ ಕನ್ನಡದವರೇ, ಕನ್ನಡದಲ್ಲೇ ಮಾಡಬಹುದಿತ್ತು ಅಲ್ಲವೇ?! ಶಕುಂತಲಾ ದೇವಿ ಅಪ್ಪಟ ಕನ್ನಡತಿ , ನಮ್ಮ ನಾಡಿನ ಹೆಮ್ಮೆ!  ಆದರೆ ನಮ್ಮಲ್ಲಿ “ಕಥೆಗಳಿಲ್ಲ” ಎಂದು ಕೊರಗುವ ನಿರ್ದೇಶಕರು, ಇಂಥ ಕತೆಗಳ ಕಡೆ ಗಮನಹರಿಸಬೇಕು! 🎥 ಕನ್ನಡದಲ್ಲಿ ಬಯೋಪಿಕ್‌ಗಳ ಕೊರತೆ ಹಿಂದೆ ಕನ್ನಡ ಚಿತ್ರರಂಗದಲ್ಲಿ ಭಕ್ತಿ, ತ್ಯಾಗ, ಐತಿಹಾಸಿಕ ಮತ್ತು ಕಲೆಗಳ ಮಹನೀಯರ ಬಗ್ಗೆ ಕುರಿತಾದ ಹಲವು ಅಚ್ಚುಮೆಚ್ಚಿನ ಚಲನಚಿತ್ರಗಳು ಬಂದಿದ್ದವು — ಭಕ್ತ ಕನಕದಾಸ , ಪುರಂದರ ದಾಸ , ಅಮರ ಶಿಲ್ಪಿ ಜಕಣಾಚಾರಿ , ರಣಧೀರ ಕಂಠೀರವ , ರಾಘವೇಂದ್ರ ಸ್ವಾಮಿ , ಕಿತ್ತೂರು ರಾಣಿ ಚೆನ್ನಮ್ಮ , ಕೃಷ್ಣದೇವರಾಯ , ಮಯೂರ ವರ್ಮಾ , ಇಮ್ಮಡಿ ಪುಲಕೇಶಿ , ಬಸವೇಶ್ವರ …! ಆದರೆ ಇತ್ತೀಚಿನ ದಿನಗಳಲ್ಲಿ, ಇಂಥ ಪ್ರೇರಣಾದಾಯಕ ಚಲನಚಿತ್ರಗಳು ಕನ್ನಡದಲ್ಲಿ ಕಾಣುವುದೇ ಕಡಿಮೆ ಆಗಿದೆ. 🌟 ಇತರೆ ಭಾಷೆಗಳ ಉದಾಹರಣೆಗಳು ಹಿಂದಿ ಚಿತ್ರರಂಗದಲ್ಲಿ ಸಾಲು ಸಾಲು ಬಯೋಪಿಕ್‌ಗಳು ಬಿಡುಗಡೆಯಾಗುತ್ತಿವೆ — ಎಂ.ಎಸ್. ಧೋನಿ , ಮೇರಿ ಕೋಮ್ , ಸುಪ್ರೀಂ ಕೋರ್ಟ್‌ನ ವಕೀಲರ ಜೀವನಾಧಾರಿತ ಚಿತ್ರಗಳು , ಸೈನಾ ನೆಹ್ವಾಲ್ , ಮಂಜಿ ದ ಮೌಂಟನ್ ಮ್...

ಬದಲಾದ ಕನ್ನಡ ಚಿತ್ರರಂಗ

Image
ಕನ್ನಡ ಚಿತ್ರರಂಗದ ಬದಲಾವಣೆಯ ಕಥೆ ಮೇಲಿನ ಹಳೆಯ ಪೋಸ್ಟರ್ಗಳನ್ನು ನೋಡುತ್ತಿದ್ದರೆ — ಇದು ಇಂದು ಸಾಧ್ಯವೇ? ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಹೌದು, ಕನ್ನಡ ಚಿತ್ರರಂಗ ಬಹಳಷ್ಟು ಬದಲಾಗಿದೆ. ಒಂದು ಕಾಲದಲ್ಲಿ ಮೆಜೆಸ್ಟಿಕ್ ಪ್ರದೇಶದಲ್ಲಿ ಹೆಜ್ಜೆಗೆ ಒಂದರಂತೆ ಸಿನಿಮಾ ಥೀಯೇಟರ್‌ಗಳು ಇದ್ದವು. ರಾಜಕುಮಾರ್ ಅವರ ಸಿನೆಮಾಗಳನ್ನು ನೋಡಲು ಹಳ್ಳಿಯ ಜನರು ಎತ್ತಿನಗಾಡಿಗಳನ್ನು ಕಟ್ಟಿಕೊಂಡು ಹತ್ತಿರದ ಪಟ್ಟಣದ ಚಿತ್ರಮಂದಿರಗಳಿಗೆ ತೆರಳುತ್ತಿದ್ದರು. ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳು ಸದಾ ಹೆಂಗಳೆಯರ ಮನಮಿಡಿಯುವ, ಭಾವನಾತ್ಮಕ ಚಿತ್ರಗಳಾಗಿದ್ದವು. ಆದರೆ ಮನೆ ಮನೆಗೂ ಟಿವಿಗಳು ಮತ್ತು ಖಾಸಗಿ ವಾಹಿನಿಗಳು ಪ್ರವೇಶಿಸಿದ ನಂತರ, ಗಾಂಧಿನಗರದ ಅನೇಕ ಚಿತ್ರಮಂದಿರಗಳು ನಿಧಾನವಾಗಿ ಶಾಪಿಂಗ್ ಕಾಂಪ್ಲೆಕ್ಸುಗಳಾಗಿ ಬದಲಾಗಿದವು. ಕರ್ನಾಟಕದ ವಿವಿಧ ಭಾಗಗಳಲ್ಲಿಯೂ ಅನೇಕ ಥೀಯೇಟರ್‌ಗಳು ಬಾಗಿಲು ಮುಚ್ಚಿಕೊಂಡವು. ಇದೀಗ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ ಮೊದಲಾದ ನಗರಗಳಲ್ಲಿ “ಮಲ್ಟಿಪ್ಲೆಕ್ಸ್ ಸಂಸ್ಕೃತಿ” ಬೆಳೆಯಿತು. ಪಿವಿಆರ್ ಮತ್ತು ಐನಾಕ್ಸ್‌ಂತಹ ಕಾರ್ಪೊರೇಟ್ ಸಂಸ್ಥೆಗಳು ಚಿತ್ರರಂಗದ ವಲಯವನ್ನು ಹಿಡಿದು ಇಟ್ಟುಕೊಂಡಿವೆ ಎಂದು ಹೇಳಿದರೂ ತಪ್ಪಾಗುವುದಿಲ್ಲ. ಇಂದು ಅಮೆಜಾನ್ ಮತ್ತು ನೆಟ್‌ಫ್ಲಿಕ್ಸ್‌ಂತಹ ಬಹುರಾಷ್ಟ್ರೀಯ ಕಂಪನಿಗಳು ನಮ್ಮ ಸಿನೆಮಾವನ್ನು ಖರೀದಿಸಿ, ಕೇವಲ ಬಿಡುಗಡೆಗೊಂಡು ಒಂದು ತಿಂಗಳೊಳಗೆ ...

ಇನ್ಫೋಸಿಸ್ನಲ್ಲಿ ಹೂಡಿಕೆ ಮಾಡಲು ಇದು ಸಕಾಲವೇ?

Image
ಇನ್ಫೋಸಿಸ್ ಷೇರುಗಳು ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಏರಳಿತ ಕಂಡಿದೆ. ಇದು ಕಳೆದ ವರ್ಷ ಎಲ್ಲ analystಗಳ ನೆಚ್ಚಿನ IT ಸ್ಟಾಕ್ ಕೂಡ ಆಗಿತ್ತು. ಪ್ರತಿ ಷೇರಿನ ಬೆಲೆ ಗರಿಷ್ಟ 847 ರೂಪಾಯಿಗಳ ತನಕ ಏರಿಕೆ ಕಂಡಿತ್ತು. ತ್ರೈಮಾಸಿಕ ಫಲಿತಾಂಶಗಳು ಮತ್ತು ಆದಾಯ ಪ್ರೊಜೆಕ್ಷನ್ ಕೂಡ ಚೆನ್ನಾಗಿ ಇತ್ತು. ಆದರೆ ಕಂಪನಿಯ ಕೆಲವು ಅನಾಮಧೇಯ ಉದ್ಯೋಗಿಗಳು ಭಾರತ ಮತ್ತು ಅಮೇರಿಕಾದ ಷೇರು ಮಾರುಕಟ್ಟೆಗೆ  whistleblower ಕಂಪ್ಲೇಂಟ್ ಮಾಡಿದ್ದರಿಂದ, ಇನ್ಫೋಸಿಸ್ನ ಷೇರು ಬೆಲೆ ಕನಿಷ್ಟ ಮೊತ್ತ ಅಂದರೆ 635 ರೂಪಾಯಿಗಳಿಗೆ ಇಳಿಕೆ ಕಂಡು, ಹೂಡಿಕದಾರರ ನಂಬಿಕೆಯನ್ನೇ ಕಳೆದುಕೊಂಡಿತ್ತು. ಆದರೆ ಕ್ರಮೇಣ ಷೇರಿನ ಬೆಲೆ ಏರಿಕೆ ಕಂಡು ಇಂದು 740 ರುಪಾಯಿಗೆ ಬಂದು ನಿಂತಿದೆ. ೧೦ January ,೨೦೨೦ ರಂದು, ಇನ್ಫೋಸಿಸ್ನ ಮೂರನೇ ತ್ರೈಮಾಸಿಕ ಫಲಿತಾಂಶ ಹೊರಬಂದಿದೆ. ಮಾರುಕಟ್ಟೆ ಪಂಡಿತರ ನಿರೀಕ್ಷೆಯನ್ನು ಮೀರಿದ ಫಲಿತಾಂಶ ಬಂದಿದೆ. ಹಾಗಾದರೆ ಇನ್ಫೋಸಿಸ್ ನಲ್ಲಿ ಹೂಡಿಕೆ ಮಾಡಲು ಇದು ಸಕಾಲವೇ? ಆದರೆ ಇನ್ಫೋಸಿಸ್ನ whistleblower ಕಂಪ್ಲೇಂಟ್ ಇನ್ನು ಇತ್ಯರ್ಥವಾಗಿಲ್ಲ. ಹೂಡಿಕೆದಾರರಿಗೆ ಇನ್ಫೋಸಿಸ್ನ ವ್ಯವಹಾರಗಳು ಅಂತಹ ಕ್ಲಾರಿಟಿ ಕೊಟ್ಟಿಲ್ಲ ಅಂತಾನೆ ಹೇಳಬಹುದು. ಇನ್ಫೋಸಿಸ್ನ ಸಮಸ್ಯೆ ಬೂದಿ ಮುಚ್ಚಿದ ಕೆಂಡದಂತೆ ಇದೆ. ಇನ್ಫೋಸಿಸ್ ಈ ಎಲ್ಲ ಸಮಸ್ಯೆಗಳಿಂದ ಹೊರಬಂದರೆ, ಖಂಡಿತಾ ಮತ್ತೊಮ್ಮೆ ಹೂಡಿಕದಾರರ ನೆಚ್ಚಿನ ಸ್ಟಾಕ್ ಆಗುವುದರಲ್ಲಿ ಯಾವುದೇ ಅನುಮಾನವಿ...

ಅವನೇ ಶ್ರೀಮನ್ನಾರಾಯಣ ಚಲನಚಿತ್ರ ವಿಮರ್ಶೆ

Image
ನಾನು ಇತ್ತೀಚಿನ ದಿನಗಳಲ್ಲಿ ನೋಡಿದ ಅದ್ಭುತ ಚಲನಚಿತ್ರ ಎಂದರೆ ಅದು "ಅವನೇ ಶ್ರೀಮನ್ನಾರಾಯಣ". ಈ ಸಿನಿಮಾವೇ ಒಂದು ಅನುಭವ ಎಂದರೆ ತಪ್ಪಾಗಲ್ಲ. ಈ ಚಿತ್ರದ ಪ್ರತಿಯೊಂದು ಪಾತ್ರವು ಅದ್ಭುತ. ಛಾಯಾಗ್ರಹಣ ಮತ್ತು ಹಿನ್ನಲೆ ಸಂಗೀತವಂತೂ ನಮ್ಮನ್ನು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಇದು ಹಾಲಿವುಡ್ ಸಿನೆಮಾಗಳಿಂದ ಪ್ರೇರಿತಗೊಂಡಿದ್ದರೂ ಸಹ, ನಮ್ಮ ಮಣ್ಣಿನ ಸೊಗಡು ಸಹ ಈ ಚಿತ್ರಕ್ಕೆ ಇದೆ. ಸಿನಿಮಾದ ಕಥೆ ಸಾಧಾರಣವಾಗಿದ್ದರೂ ಸಹ, ಚಿತ್ರಕೆಥೆ ಅಂತೂ ಅದ್ಭುತವಾಗಿದೆ. ಈ ಚಿತ್ರ ನಮ್ಮನ್ನು ಪ್ರತಿ ಕ್ಷಣ ಕಾಡುತ್ತದೆ.ಒಬ್ಬ ಪ್ರೇಕ್ಷಕ ಖಂಡಿತವಾಗಿಯೂ ಈ ಸಿನಿಮಾದಲ್ಲಿ ಪಯಣಿಸುತ್ತಾನೆ. ಈ ಸಿನಿಮಾದ ನಿರ್ದೇಶಕ ಸಚಿನ್ ರವಿ ಅವರ ಮೊದಲ ಸಿನಿಮಾ ಅಂತ ಎಲ್ಲಿಯೂ ನಮಗೆ ಅನಿಸುವುದಿಲ್ಲ. ಅವರ ಸಂಕಲನ ಕೂಡ ಅಷ್ಟೇ ಚುರುಕಾಗಿದೆ.ರಕ್ಷಿತ್ ಶೆಟ್ಟಿ ಅವರ ನಿರ್ದೇಶನದ ಅನುಭವ ಖಂಡಿತಾ ಸಚಿನ್ ರವಿ ಅವರಿಗೆ ಸಹಾಯ ಮಾಡಿದೆ ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಕಲಾವಿದರನ್ನು ಎಷ್ಟೇ ಮೆರೆಸಿದರೂ, ಈ ಸಿನೆಮಾವೆಂಬುದು ಸದಾ ತಂತ್ರಜ್ಞರ ಮಾಧ್ಯಮ ಎನ್ನುವುದು ಪದೇ ಪದೇ ರುಜುವಾತು ಪಡಿಸುತ್ತಲೇ ಇರುತ್ತದೆ. ನನ್ನ ಪ್ರಕಾರ ಈ ಸಿನಿಮಾದ ನಿಜವಾದ ಹೀರೋಗಳೆಂದರೆ, ಚಿತ್ರಕಥೆ ಬರೆದ ರಕ್ಷಿತ್ ಶೆಟ್ಟಿ ಮತ್ತವರ ಏಳು ಜನ ಗೆಳೆಯರು, ನಿರ್ದೇಶಕ ಸಚಿನ್ ರವಿ, ಛಾಯಾಗ್ರಾಹಕ ಕರಮ್ ಚಾವ್ಲಾ, ಸಂಗೀತ ನಿರ್ದೇಶಕರಾದ ಅಜನೀಶ್ ಮತ್ತು ಚರಣರಾಜ್. ಈ ಚಿತ್ರದ ಪ್ರತಿ ...

ಕುದರೆಮುಖ ರಾಷ್ಟ್ರೀಯ ಉದ್ಯಾನವನ

Image
ಕುದರೆ ಮುಖ ಆಕಾರದ ಪರ್ವತ ಕುದರೆಮುಖ ರಾಷ್ಟ್ರೀಯ ಉದ್ಯಾನವನ, ಕರ್ನಾಟಕದ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದೆ. ಇದು ಬೆಂಗಳೂರಿಂದ ಸುಮಾರು ೩೩೦ km ದೂರದಲ್ಲಿ ಇದೆ. ಇದು ಸಂರಕ್ಷಿತ ಅರಣ್ಯ ಪ್ರದೇಶವಾದರಿಂದ ಇಲ್ಲಿ ಖಾಸಗಿ ಹೋಂಸ್ಟೇ ಅಥವಾ ರೆಸಾರ್ಟ್ಗಳಿಗೆ ಅವಕಾಶವಿಲ್ಲ. ಇಲ್ಲಿ ಪ್ರವಾಸಿಗರು ಉಳಿಯಬೇಕೆಂದರೆ, ಅರಣ್ಯ ಇಲಾಖೆಯ ಜಂಗಲ್ lodges ಅಂಡ್ ರೆಸಾರ್ಟ್ಸ್ ನಡೆಸುವ ಭಗವತಿ ನೇಚರ್ ಕ್ಯಾಂಪ್ ಇದೆ. ಭಗವತಿ ನೇಚರ್ ಕ್ಯಾಂಪ್ನಲ್ಲಿ ಟೆಂಟ್ ಹೌಸ್,ವುಡನ್ cottages ಮತ್ತು dormitory ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಇದೆ. ಭಗವತಿ ನೇಚರ್ ಕ್ಯಾಂಪ್ನಲ್ಲಿ ಉಳಿದುಕೊಳ್ಳಬೇಕೆಂದರೆ, ಜಂಗಲ್ lodges ಮತ್ತು ರೆಸಾರ್ಟ್ಸ್ ವೆಬ್ಸೈಟ್ ಅಲ್ಲಿ ಬುಕ್ ಮಾಡಬಹುದು. ಕುದರೆಮುಖ ಸಮೀಪ ಸ್ಥಳಗಳಾದ ಸಂಸೆ ಮತ್ತು ಕಳಸ ಗಳಲ್ಲಿ ಖಾಸಗಿ ರೆಸಾರ್ಟ್ಸ್ ಮತ್ತು ಹೋಂಸ್ಟೇ ಗಳು ಸಾಕಷ್ಟು ಸಂಖ್ಯೆ ಅಲ್ಲಿ ಸಿಗುತ್ತವೆ. ಕುದರೆಮುಖದಲ್ಲಿ ಚಾರಣಪ್ರಿಯರಿಗೆ ಸಾಕಷ್ಟು ಸಂಖ್ಯೆಯಲ್ಲಿ ಟ್ರೆಕಿಂಗ್ ಮಾಡಲು ಉತ್ತಮ ಪೀಕ್ ಪಾಯಿಂಟ್ ಗಳಿವೆ. ಅವುಗಳಲ್ಲಿ ಕುರಿಂಜಲ್ , ಕ್ಯಾತನಮಕ್ಕಿ ಮತ್ತು ಕುದರೆಮುಖ ಪೀಕ್ ಪಾಯಿಂಟ್ ಪ್ರಮುಖ ಸ್ಥಳಗಳು. ಒಂದು ಕಾಲದಲ್ಲಿ ಕೇಂದ್ರ ಸರ್ಕಾರದ ಅಂಗ ಸಂಸ್ಥೆ ಕುದರೆಮುಖ ಗಣಿಗಾರಿಕೆ ಕಂಪನಿ( KIOCL ) ಇಲ್ಲಿ ಗಣಿಗಾರಿಕೆ ಮಾಡುತ್ತಿದ್ದ ಕಾರಣ(ಈಗ ಗಣಿಗಾರಿಕೆ ನಿಷೇದಿಸಲಾಗಿದೆ), ಇಂದಿಗೂ ಸಹ ಪಾಳು ಬಿದ್ದ ಪೆಟ್ರೋಲ್ ಬಂಕ್, ಕೇಂದ್ರೀಯ ವಿ...

ಸ್ಟಾಕ್ ಮಾರ್ಕೆಟ್ ಎಂಬ ಮಾಯಾಜಾಲ

Image
ಭಾರತದ ಮಧ್ಯಮ ವರ್ಗದ ಜನರಿಗೆ ಶೇರ್ ಮಾರ್ಕೆಟ್ ಅಂದ್ರೆ ಏನೋ ಒಂಥರಾ ಭಯ. ಸಾಕಷ್ಟು ವಿದ್ಯಾವಂತರೇ ಇರುವ ಈ ಮಧ್ಯಮ ವರ್ಗದಲ್ಲಿ, ರಿಸ್ಕ್ ಯಾಕೆ ಅಂತ ೯೦% ಜನ ಈ ಶೇರ್ ಮಾರ್ಕೆಟ್ ನಿಂದ ದೂರವೇ ಇದ್ದಾರೆ. ಬೇಕಾದರೆ ಗಮನಿಸಿ ನೋಡಿ, ಇವರೆಲ್ಲರೂ ಯಾವುದೇ ರಿಸ್ಕ್ ಇಲ್ಲದೆ ದುಡ್ಡು ತಂದುಕೊಡುವ FD , LIC ಇನ್ಶೂರೆನ್ಸ್ ಪಾಲಿಸಿ ಅಥವಾ PPF ತರಹದ ಅಥವಾ gold ಅಥವಾ ರಿಯಲ್ ಎಸ್ಟೇಟ್ನಲ್ಲಿ ತಮ್ಮ ಹಣವನ್ನು ಇನ್ವೆಸ್ಟ್ ಮಾಡುತ್ತಾರೆ. LIC ,ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ಗಳು ಇದೆ ಮಧ್ಯಮ ವರ್ಗದ ಜನರ ಹಣವನ್ನು ಶೇರ್ ಮಾರ್ಕೆಟ್ನಲ್ಲಿ ತೊಡಗಿಸಿ ಸಾಕಷ್ಟು ಹಣವನ್ನು ಸಂಪಾದಿಸುತ್ತಿದ್ದಾರೆ. ಹಾಗಾದರೆ ಈ ಶೇರ್ ಮಾರ್ಕೆಟ್ ನಲ್ಲಿ ದುಡ್ಡು ಮಾಡುವುದು ಸುಲಭವ? ಖಂಡಿತಾ ಸುಲಭವಲ್ಲ. ಈ ಶೇರ್ ಮಾರ್ಕೆಟ್ ನಲ್ಲೂ ಕೂಡ ೯೫% ಜನರು ಹಣವನ್ನು ಕಳೆದುಕೊಳ್ಳುತ್ತಾರೆ. ಹಾಗೆ ನೋಡಿದರೆ ಎಲ್ಲ ಕ್ಷೇತ್ರಗಳಲ್ಲೂ ಸಕ್ಸಸ್ ರೇಟ್ ಇರುವುದು ಕೇವಲ ೫% ಅಥವಾ ೧೦%. ಎಲ್ಲರೂ ಶಾರುಖ್ ಖಾನ್ ಆಗಲು ಸಾಧ್ಯವಿಲ್ಲ ಅಥವಾ ಎಲ್ಲರೂ ನರೇಂದ್ರ ಮೋದಿ ಆಗಲೂ ಸಾಧ್ಯವಿಲ್ಲ. ದೇಶಕ್ಕೆ ಒಬ್ಬನೇ ಪ್ರಧಾನ ಮಂತ್ರಿ ಮತ್ತು ಒಬ್ಬನೇ ಸೂಪರ್ಸ್ಟಾರ್ ಮತ್ತು ಹಾಗೆಯೇ ಒಂದು ಕ್ರಿಕೆಟ್ ಟೀಮ್ನಲ್ಲಿ ಆಡುವುದು ಕೇವಲ ೧೧ ಜನ ಮಾತ್ರ. ಹಾಗೆಯೇ ಶೇರ್ ಮಾರ್ಕೆಟ್ ನಲ್ಲಿ ದುಡ್ಡು ಮಾಡಬೇಕಾದರೆ ಸಾಕಷ್ಟು ಅಧ್ಯಯನ ಮುಖ್ಯ ಮತ್ತು ಮಾರ್ಕೆಟ್ ಏರಳಿತದ ಬಗ್ಗೆ ಸಾಕಷ್ಟು ಜ್ಞಾನ ಮತ್ತು ತಿಳುವಳಿಕೆ ಅತ್ಯಗತ...