ಪುಷ್ಪಕ ವಿಮಾನ ಮತ್ತು ವಿಂಡ್ಸರ್ ಮ್ಯಾನರ್ — ಬೆಂಗಳೂರಿನ ಮೂಕ ಕಥೆ
ಪುಷ್ಪಕ ವಿಮಾನ ಎಂಬ ಮೂಕಿ ಚಿತ್ರ ೧೯೮೭ರಲ್ಲಿ ಬಿಡುಗಡೆಯಾಯಿತು. ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶನದಲ್ಲಿ, ಕಮಲ್ ಹಾಸನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ ಈ ಸಿನಿಮಾ ಭಾರತೀಯ ಸಿನೆಮಾದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಭಾಷೆಯ ಅಂತರಗಳೆಲ್ಲವನ್ನೂ ಮೀರಿ, ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಕಲಾವಿದರು ಹಾಗೂ ತಂತ್ರಜ್ಞರ ಸಂಯುಕ್ತ ಪ್ರಯತ್ನದಿಂದ ಈ ಸಿನಿಮಾ ತಯಾರಾದದ್ದು ಒಂದು ವೈವಿಧ್ಯಮಯ ಸಂಸ್ಕೃತಿಯ ಪ್ರತೀಕವೇ ಸರಿ ಮತ್ತು ವೈವಿಧ್ಯಮಯ ಸಂಸ್ಕೃತಿಯ ಸಂಕೇತವಾದ ನಮ್ಮ ಬೆಂಗಳೂರಿನಲ್ಲಿ ಈ ಸಿನಿಮಾ ತಯಾರಾಗಿದ್ದು ನಿಜಕ್ಕೂ ಕಾಕತಾಳೀಯ. ಇಂದು ನಮ್ಮ ಬೆಂಗಳೂರಿನಲ್ಲಿ ಭಾಷೆಯ ವಿಷಯವಾಗಿ ಆಗಾಗ್ಗೆ ಉಂಟಾಗುವ ವಿವಾದಗಳ ನಡುವೆ — ಪುಷ್ಪಕ ವಿಮಾನ ಸಿನಿಮಾದ “ಮೂಕತೆ” ನಮಗೆ ಒಂದು ಗಾಢವಾದ ಸಂದೇಶ ನೀಡುತ್ತದೆ. ಎಲ್ಲ ಭಾಷೆಯ ಜನರನ್ನು ಒಗ್ಗೂಡಿಸುವ ಬೆಂಗ್ಳೂರಿನ ಆತ್ಮವನ್ನು ಪುಷ್ಪಕ ವಿಮಾನ ಸಿನಿಮಾ ಮೌನವಾಗಿ ಪ್ರತಿನಿಧಿಸುತ್ತದೆ. ಈ ಚಿತ್ರದ ಬಹುಪಾಲು ಚಿತ್ರೀಕರಣಗೊಂಡಿದ್ದು ಬೆಂಗಳೂರಿನ ಹೃದಯಭಾಗದಲ್ಲಿರುವ ITC Windsor Manor ಹೋಟೆಲಿನಲ್ಲಿ. ಬ್ರಿಟಿಷ್ ಕಾಲೋನಿಯಲ್ ಶೈಲಿಯಲ್ಲಿ ನಿರ್ಮಿತ ಈ ಹೋಟೆಲ್, ಇಂದಿಗೂ ಬೆಂಗಳೂರಿನ ರಾಜಶ್ರೇಯದ, ಶ್ರೇಷ್ಟ ಸೊಗಸಿನ ಪ್ರತೀಕವಾಗಿದೆ. ಹಳೆಯ ಬೆಂಗಳೂರು ಮತ್ತು ಬ್ರಿಟಿಷರ ಕಾಲದ ವಾಸ್ತುಶಿಲ್ಪದ ಸಂಯೋಜನೆಯಂತಿದೆ ಇದರ ವಿನ್ಯಾಸ. ಪುಷ್ಪಕ ವಿಮಾನದಲ್ಲಿನ ಅತ್ಯಂತ ಪ್...