Posts

Showing posts from 2026

ರಾಹುಲ್ ದ್ರಾವಿಡ್: ಅಬ್ಬರವಿಲ್ಲದ ಅದ್ಭುತ, ಭಾರತೀಯ ಕ್ರಿಕೆಟ್‌ನ 'ನಿಜವಾದ ಜಂಟಲ್‌ಮ್ಯಾನ್'

Image
ಕ್ರಿಕೆಟ್ ಎಂದರೆ ಕೇವಲ ರನ್‌ಗಳ ಮಳೆ ಅಥವಾ ವಿಕೆಟ್‌ಗಳ ಪತನವಲ್ಲ; ಅದು ಸಂಯಮ, ನಿಸ್ವಾರ್ಥತೆ ಮತ್ತು ಬದ್ಧತೆಯ ಆಟ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸಚಿನ್ ತೆಂಡೂಲ್ಕರ್ ಅವರಂತಹ ದೈತ್ಯ ಪ್ರತಿಭೆಗಳು, ಗಂಗೂಲಿ ಅವರಂತಹ ಆಕ್ರಮಣಕಾರಿ ನಾಯಕರು, ಲಕ್ಷ್ಮಣ್ ಅವರಂತಹ ಕಲಾತ್ಮಕ ಆಟಗಾರರು ಮತ್ತು ಸೆಹ್ವಾಗ್ ಅವರಂತಹ ಎದೆಗಾರಿಕೆಯ ಆಟಗಾರರು ಮಿಂಚಿದ್ದಾರೆ. ಆದರೆ, ಇವರೆಲ್ಲರ ಯಶಸ್ಸಿನ ಹಿಂದೆ ಒಬ್ಬ ವ್ಯಕ್ತಿ ಮೌನವಾಗಿ, ಗಟ್ಟಿಯಾಗಿ ನಿಂತಿದ್ದರು. ಅವರೇ ನಮ್ಮ ಕರುನಾಡಿನ ಹೆಮ್ಮೆ, ರಾಹುಲ್ ದ್ರಾವಿಡ್. ದ್ರಾವಿಡ್ ಅವರು ಸೆಹ್ವಾಗ್‌ರಂತೆ ಅಬ್ಬರಿಸಲಿಲ್ಲ, ಸಚಿನ್ ಅವರಂತೆ ಮೈಲಿಗಲ್ಲುಗಳ ಹಿಂದೆ ಬೀಳಲಿಲ್ಲ,ಗಂಗೂಲಿಯಂತೆ ಹಠಕ್ಕೆ ಬೀಳುತ್ತಿರಲಿಲ್ಲ. ಆದರೆ, ತಂಡ ಸಂಕಷ್ಟದಲ್ಲಿದ್ದಾಗಲೆಲ್ಲ 'ಗೋಡೆ'ಯಂತೆ ನಿಂತು ಭಾರತಕ್ಕೆ ಆಸರೆಯಾದರು. ಇವರ ನಿಸ್ವಾರ್ಥ ಕ್ರಿಕೆಟ್ ಜೀವನದ ಕೆಲವು ಮರೆಯಲಾಗದ ಕ್ಷಣಗಳು ಇಲ್ಲಿವೆ. ೧. ಅಲನ್ ಡೊನಾಲ್ಡ್ ಎದುರು ತೋರಿದ ಎದೆಗಾರಿಕೆ (೧೯೯೭) ೧೯೯೭ರಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಏಕದಿನ ಪಂದ್ಯವದು. ಆಗಿನ ಕಾಲದ ಅತ್ಯಂತ ಭಯಾನಕ ವೇಗಿ ಅಲನ್ ಡೊನಾಲ್ಡ್‌ ಎಂದರೆ ಘಟಾನುಘಟಿ ಬ್ಯಾಟರ್‌ಗಳೇ ನಡುಗುತ್ತಿದ್ದರು. ಅಂತಹ ಸಮಯದಲ್ಲಿ, ಟೆಸ್ಟ್ ಆಟಗಾರ ಎಂಬ ಹಣೆಪಟ್ಟಿ ಹೊತ್ತಿದ್ದ ಯುವ ದ್ರಾವಿಡ್, ಡೊನಾಲ್ಡ್ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸಿ ಅಚ್ಚರಿ ಮೂಡಿಸಿದ್ದರು. ಡೊನಾಲ್ಡ್ ಅವರು ತ...