Posts

Showing posts from 2025

ಭಾರತದ ಲಿಟಲ್ ಫ್ರಾನ್ಸ್: ಪುದುಚೇರಿ – ಇತಿಹಾಸ, ವೈಪರೀತ್ಯ ಮತ್ತು ಜೀವನದ ವಿಪರ್ಯಾಸ

Image
ಭಾರತದ ಭೂಪಟದಲ್ಲಿ ಪುದುಚೇರಿ ಎನ್ನುವುದು ಕೇವಲ ಒಂದು ಕೇಂದ್ರಾಡಳಿತ ಪ್ರದೇಶವಲ್ಲ; ಅದು ಇತಿಹಾಸದ ಪುಟಗಳು ಮತ್ತು ಆಧುನಿಕ ಜೀವನದ ವೈಪರೀತ್ಯಗಳು ಸಂಗಮಿಸುವ ಒಂದು ವಿಶಿಷ್ಟ ತಾಣ. 1947ರಲ್ಲಿ ಬ್ರಿಟಿಷರಿಂದ ನಮಗೆ ಸ್ವಾತಂತ್ರ್ಯ ಸಿಕ್ಕರೂ, ಈ ಪುಟ್ಟ ಪ್ರಾಂತ್ಯ ಮಾತ್ರ 1954ರವರೆಗೆ ಫ್ರಾನ್ಸ್ ಆಡಳಿತದಲ್ಲೇ ಉಳಿದಿತ್ತು. 1962ರಲ್ಲಿ ಅಧಿಕೃತವಾಗಿ ಭಾರತದ ಕೇಂದ್ರಾಡಳಿತ ಭಾಗವಾದ ಪುದುಚೇರಿ, ಇಂದಿಗೂ ತನ್ನೊಡಲಲ್ಲಿ ಫ್ರೆಂಚ್ ಸಂಸ್ಕೃತಿಯನ್ನು ಜೀವಂತವಾಗಿರಿಸಿಕೊಂಡಿದೆ. ವೈಟ್ ಟೌನ್: ಕಾಲದ ಹಾದಿಯಲ್ಲಿ ಒಂದು ಪಯಣ ಪುದುಚೇರಿಯ 'ವೈಟ್ ಟೌನ್' (White Town) ಅಥವಾ ಫ್ರೆಂಚ್ ಕಾಲೋನಿಯಲ್ಲಿ ಹೆಜ್ಜೆ ಹಾಕಿದರೆ ನಾವು ಭಾರತದಲ್ಲಿದ್ದೇವೋ ಅಥವಾ ಫ್ರಾನ್ಸ್‌ನ ಯಾವುದೋ ಹಳೆಯ ಬೀದಿಯಲ್ಲಿದ್ದೇವೋ ಎಂಬ ಭ್ರಮೆ ಉಂಟಾಗುತ್ತದೆ.ಇಂದಿಗೂ ಸಹ ಕಾಲೋನಿಯಲ್ ಫ್ರಾನ್ಸ್ ಕುರುಹುಗಳು ಈ ಪ್ರದೇಶದಲ್ಲಿಇದೆ. ವಾಸ್ತುಶಿಲ್ಪ: ಸಾಲು ಸಾಲಾದ ಹಳದಿ ಬಣ್ಣದ ಫ್ರೆಂಚ್ ಕಾಲೋನಿಯಲ್ ಶೈಲಿಯ ಕಟ್ಟಡಗಳು. ರುಚಿ: ಅಧಿಕೃತ ಫ್ರೆಂಚ್ ಶೈಲಿಯ ಬೇಕರಿಗಳು ಮತ್ತು ಕೆಫೆಗಳು. ಬದಲಾವಣೆ: ಹಿಂದೆ ವಸತಿಗೃಹಗಳಾಗಿದ್ದ ಅನೇಕ ಫ್ರೆಂಚ್ ಮನೆಗಳು ಇಂದು ಐಷಾರಾಮಿ ಹೋಟೆಲ್‌ ಮತ್ತು ಕೆಫೆಗಳಾಗಿ ಮಾರ್ಪಟ್ಟಿವೆ. ಪ್ರಸಿದ್ಧ P romenade  (ರಾಕ್) ಬೀಚ್‌ ಗೆ ಹೊಂದಿಕೊಂಡಂತಿರುವ ಈ ಪ್ರದೇಶ ಅತ್ಯಂತ ಸುಸಜ್ಜಿತವಾಗಿದ್ದು, ಪ್ರವಾಸಿಗರ ಮೊದಲ ಆಯ್ಕೆಯಾಗಿದೆ. ಒಂದಷ್ಟು ಫ...

ಬಸವನಗುಡಿ: ಬೆಂಗಳೂರು ನಗರದ ಹೆಗ್ಗುರುತು

Image
ಬೆಂಗಳೂರು ಇಂದು 'ಸಿಲಿಕಾನ್ ಸಿಟಿ' ಆಗಿ ಜಗತ್ತಿನ ಭೂಪಟದಲ್ಲಿ ಗುರುತಿಸಿಕೊಂಡಿರಬಹುದು. ಆದರೆ, ಈ ಆಧುನಿಕ ಮೆಟ್ರೋಪಾಲಿಟನ್ ನಗರದ ಗದ್ದಲದ ನಡುವೆಯೂ ತನ್ನತನವನ್ನು, ಮಣ್ಣಿನ ಸೊಗಡನ್ನು ಮತ್ತು ಸಾಂಪ್ರದಾಯಿಕ ಮೌಲ್ಯಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡಿರುವ ಒಂದು ಪ್ರದೇಶವಿದ್ದರೆ ಅದು  ಬಸವನಗುಡಿ . ಹಬ್ಬಗಳ ತವರು ಈ ಬಸವನಗುಡಿ ಹಬ್ಬ ಹರಿದಿನ ಬಂತೆಂದರೆ ಬೆಂಗಳೂರಿನ ಕನ್ನಡಿಗರಿಗೆ ಮೊದಲು ನೆನಪಾಗುವುದೇ ಬಸವನಗುಡಿ. ಸಂಕ್ರಾಂತಿಯ ಸಕ್ಕರೆ ಅಚ್ಚು, ಎಳ್ಳು-ಬೆಲ್ಲದಿಂದ ಹಿಡಿದು ದೀಪಾವಳಿಯ ಒಬ್ಬಟ್ಟು,ಕಜ್ಜಾಯದವರೆಗೆ - ಹಬ್ಬದ ಪೂಜೆಗೆ ಬೇಕಾದ ಸಕಲ ಸಾಮಗ್ರಿಗಳೂ ಇಲ್ಲಿ ಲಭ್ಯ. ಇಂದಿನ ಧಾವಂತದ ಬದುಕಿನಲ್ಲಿ ತಿನಿಸುಗಳನ್ನು ತಯಾರಿಸಲು ಸಮಯವಿಲ್ಲದ ಆಧುನಿಕ ಮಹಿಳೆಯರಿಗೆ ಬ್ರಾಹ್ಮಣ ಕುಟುಂಬಗಳು ನಡೆಸುವ ಬೃಂದಾವನ ಸ್ಟೋರ್ಸ್, ಗುರು ರಾಘವೇಂದ್ರ ಸ್ಟೋರ್ಸ್ ಮತ್ತು ರಾಮ ಟ್ರೇಡರ್ಸ್‌ನಂತಹ ಅಂಗಡಿಗಳು ಲಭ್ಯವಿದೆ. ನಗರದೊಳಗಿನ ಒಂದು ಹಳ್ಳಿ ಬಸವನಗುಡಿಯನ್ನು 'ಬೆಂಗಳೂರಿನ ಒಳಗಿರುವ ಹಳ್ಳಿ' ಎನ್ನಬಹುದು. ಇಲ್ಲಿನ  ಕಡಲೇಕಾಯಿ ಪರಿಷೆ  ಹಳ್ಳಿಯ ಜಾತ್ರೆಯನ್ನೇ ನೆನಪಿಸುತ್ತದೆ. ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ನಡೆಯುವ ಪ್ರಸಿದ್ಧ  ಅವರೆಬೇಳೆ ಮೇಳ  ಮತ್ತು ಮೈಸೂರು ದಸರಾವನ್ನೂ ಮೀರಿಸುವಂತಹ  ಗಣೇಶೋತ್ಸವ  ಈ ಭಾಗದ ಸಾಂಸ್ಕೃತಿಕ ಮೆರುಗು. ಕಲೆ,ಸಾಹಿತ್ಯ,ಶಿಕ್ಷಣ,ಕ್ರೀಡೆ ಮತ್ತು ಸಾಂಸ್ಕೃತಿಕ ದಿಗ್ಗಜರ ನೆಲ...

ಕ್ರಿಕೆಟ್ ವೀಕ್ಷಕ ವಿವರಣೆ: ಕಿವಿಗೆ ಅಪ್ಪಳಿಸುವ ರಸದೌತಣ ಮತ್ತು ಮರೆಯಲಾಗದ ಧ್ವನಿಗಳು

Image
  ಕ್ರಿಕೆಟ್ ಎಂಬುದು ಕೇವಲ ಆಟವಲ್ಲ , ಅದೊಂದು ಭಾವನೆ . ಮೈದಾನದಲ್ಲಿ ಬ್ಯಾಟ್ ಮತ್ತು ಬಾಲ್ ನಡುವೆ ನಡೆಯುವ ಕಾಳಗಕ್ಕೆ ಜೀವ ತುಂಬುವುದು ಕಾಮೆಂಟೇಟರ್ ಬಾಕ್ಸ್ ‌ ನಿಂದ ಕೇಳಿಬರುವ ಆ ಧ್ವನಿಗಳು . ಹೌದು , ವೀಕ್ಷಕ ವಿವರಣೆ (Commentary) ಇಲ್ಲದ ಕ್ರಿಕೆಟ್ , ಉಪ್ಪಿಲ್ಲದ ಅಡುಗೆಯಂತೆ ನೀರಸ . ಆಸ್ಟ್ರೇಲಿಯಾದ ಆ ' ಬಾಕ್ಸಿಂಗ್ ಡೇ ' ಮತ್ತು ಚಾನೆಲ್ ೯ ವೈಭವ ಅದು 1999ರ ಡಿಸೆಂಬರ್ 26. ಮೆಲ್ಬೋರ್ನ್‌ನಲ್ಲಿ ನಡೆಯುತ್ತಿದ್ದ ಬಾಕ್ಸಿಂಗ್ ಡೇ ಟೆಸ್ಟ್ ಮ್ಯಾಚ್. ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಮತ್ತು ಶ್ರೇಷ್ಠ ಬೌಲರ್ ಗ್ಲೆನ್ Mcgrath ನಡುವೆ ನಡೆಯುತ್ತಿದ್ದ ಕಾಳಗ ಅದು. ಇದನ್ನು ಕೇವಲ ಕ್ರಿಕೆಟ್ ಕಾಳಗ ಎಂದರೆ ಸಾಲದು; and it was just pure poetry! ಕೆಟ್ಟ ಚೆಂಡುಗಳನ್ನು ಎಸೆಯದ ಬೌಲರ್ Mcgrath ಮತ್ತು ತಾಂತ್ರಿಕವಾಗಿ ಪರಿಪೂರ್ಣ ಬ್ಯಾಟ್ಸ್‌ಮನ್ ಸಚಿನ್—ಇಬ್ಬರ ನಡುವಿನ ಪೈಪೋಟಿ ನೋಡಲು ಎರಡು ಕಣ್ಣು ಸಾಲುತ್ತಿರಲಿಲ್ಲ. ಆ ಕ್ಷಣಗಳಿಗೆ ಇನ್ನಷ್ಟು ಮೆರಗು ನೀಡುತ್ತಿದ್ದವರು ಕಾಮೆಂಟೇಟರ್ ಬಾಕ್ಸ್‌ನಲ್ಲಿದ್ದ ದಿಗ್ಗಜರು—Richie Benaud, Tony Greig ಮತ್ತು Ian Chappell. ಅವರ ಮಾತುಗಳು ಆಟದಷ್ಟೇ ರೋಮಾಂಚನಕಾರಿಯಾಗಿದ್ದವು. ಆಸ್ಟ್ರೇಲಿಯಾದ ನೆಲದಲ್ಲಿ ನಡೆಯುವ ಕ್ರಿಕೆಟ್ ನೋಡುವುದು ಎಷ್ಟು ಸೊಗಸೋ, ಅಷ್ಟೇ ಸೊಗಸು ಅಂದಿನ ದಿನಗಳಲ್ಲಿ ಚಾನೆಲ್ 9ನ ವೀಕ್ಷಕ ವಿವರಣೆ...

ಅವರೇಕಾಳು ಮೇಳ ಮತ್ತು ವಿ.ವಿ. ಪುರಂ ತಿಂಡಿ ಬೀದಿ: ಒಂದು ಸೊಗಡು

Image
ಅವರೇಕಾಳು ಉಪ್ಪಿಟ್ಟು, ಅವರೇಕಾಳು ಪಲಾವ್, ಅವರೇಕಾಳು ದೋಸೆ, ಅವರೇಕಾಳು ಸಾಂಬಾರು, ಅವರೇಕಾಳು ಪಲ್ಯ, ಅವರೇಕಾಳು ರೊಟ್ಟಿ... ಚಳಿಗಾಲ ಆರಂಭವಾಗುತ್ತಿದ್ದಂತೆ, ಅದರಲ್ಲೂ ಡಿಸೆಂಬರ್-ಜನವರಿ ತಿಂಗಳು ಬಂತೆಂದರೆ, ನಮ್ಮ ಮನೆಯಲ್ಲಿ ಸರ್ವಂ ಅವರೇಕಾಳು ಮಯಂ! ದಕ್ಷಿಣ ಭಾರತದ, ಅದರಲ್ಲೂ ನಮ್ಮ ಬೆಂಗಳೂರಿನ ಆಹಾರ ಸಂಸ್ಕೃತಿಯಲ್ಲಿ ಅವರೆಕಾಳಿಗಿರುವ ಸ್ಥಾನ ಬಹಳ ವಿಶಿಷ್ಟ. ಬೆಂದಕಾಳೂರು ಮತ್ತು ಅವರೇಕಾಳಿನ ದಂತಕಥೆ ನಮ್ಮ ಬೆಂಗಳೂರು ಮತ್ತು ಅವರೆಕಾಳಿಗಿರುವ ಸಂಬಂಧ ಇಂದಿನದಲ್ಲ, ಅದು ಶತಮಾನಗಳಷ್ಟು ಹಳೆಯದು. ಜಾನಪದ ಅಥವಾ ಒಂದು ದಂತಕತೆಯ ಪ್ರಕಾರ, ಹೊಯ್ಸಳ ರಾಜ, ವೀರ ಬಲ್ಲಾಳ II ಅವರು ಇಂದಿನ ಬೆಂಗಳೂರು ಸುತ್ತ ಮುತ್ತ ಪ್ರದೇಶಕ್ಕೆ ಬೇಟೆಗಾಗಿ ಬಂದಾಗ, ಹಸಿವು ತೀರಿಸಿಕೊಂಡದ್ದು ಬೆಂದಕಾಳು ಅಂದರೆ ಅವರೇಕಾಳಿನಿಂದ. ಇದರ ರುಚಿಯಿಂದ ಪ್ರಭಾವಿತರಾದ ರಾಜ, ಈ ಪ್ರದೇಶವನ್ನು 'ಬೆಂದಕಾಳೂರು' ಎಂದು ಕರೆದನಂತೆ. ಮುಂದೆ ಇದೇ ಹೆಸರು ಪ್ರಸಿದ್ಧಿ ಪಡೆದು ಬೆಂಗಳೂರು ಆಗಿ ಬದಲಾಯಿತು. ಇಂದಿಗೂ ಸಹ ಬೆಂಗಳೂರಿನ ಸಮೀಪದ ಮಾಗಡಿ ಪ್ರದೇಶದಲ್ಲಿ ಬೆಳೆಯುವ ಅವರೇಕಾಳಿಗೆ ಇರುವ ಸೊಗಡು, ದಕ್ಷಿಣ ಭಾರತದ ಬೇರೆ ಎಲ್ಲೂ ಸಿಗುವುದಿಲ್ಲ. ಆ ಮಣ್ಣಿನ ವಾಸನೆ, ಆ ತಾಜಾತನ—ಅದು ಬೇರೆ ತರಹದ ಅನುಭವ. ಅವರೇಕಾಳು ಮೇಳ: ಒಂದು ಸೊಗಡಿನ ಕಥೆ ಈ ಅವರೆಕಾಳಿನ ಸವಿಯನ್ನು ಸಂಭ್ರಮಿಸಲು ಬೆಂಗಳೂರಿನಲ್ಲಿ ಪ್ರತಿ ವರ್ಷ ನಡೆಯುವ ಪ್ರಮುಖ ಘಟನೆ ಎಂದರೆ, ವಿ.ವಿ. ಪುರಂ/ಬಸವನಗುಡಿಯ...

ಸಾಮಾನ್ಯರ ಜೀವನದಲ್ಲಿ ಅಸಾಧಾರಣ ಬದಲಾವಣೆ ತಂದ ತಂತ್ರಜ್ಞಾನದ ಆಧುನಿಕ ವ್ಯವಸ್ಥೆ

Image
ಒಂದುವರೆ ದಶಕದ ಹಿಂದಿನ ನೋಟ: ೨೦೧೦ರಲ್ಲಿ ನಾನು ಬರೆದ ಒಂದು ಬ್ಲಾಗ್ ನೆನಪಿದೆ. ೨೦೦೧ ರಿಂದ ೨೦೧೦ರ ದಶಕವನ್ನು 'ಡಿಜಿಟಲ್ ದಶಕ' ಎಂದು ಬಣ್ಣಿಸಿದ್ದೆ. ಅದಕ್ಕೆ ತಕ್ಕಂತೆ, ಆ ದಶಕವು ಹಲವು ಕ್ರಾಂತಿಕಾರಿ ಬದಲಾವಣೆಗಳಿಗೆ ಸಾಕ್ಷಿಯಾಗಿತ್ತು. ಆರ್ಕುಟ್, ಫೇಸ್‌ಬುಕ್, ಟ್ವಿಟ್ಟರ್, ಯೂಟ್ಯೂಬ್ ನಂತಹ ಸಾಮಾಜಿಕ ಜಾಲತಾಣಗಳು ಜನ್ಮತಾಳಿದವು. ಜೊತೆಗೆ, ಭಾರತದಲ್ಲಿ ಸೆಲ್‌ಫೋನ್ ಪ್ರತಿಯೊಬ್ಬರ ಕೈಗೂ ತಲುಪಿ, ಸಂವಹನ ಕ್ರಾಂತಿಗೆ ನಾಂದಿ ಹಾಡಿತು. ಆದರೆ, ೨೦೧೦ರ ನಂತರದ ಈ ಒಂದುವರೆ ದಶಕದಲ್ಲಿ ತಂತ್ರಜ್ಞಾನವು ಇನ್ನೊಂದು ಮಹತ್ವದ ಮಗ್ಗುಲಿಗೆ ಹೊರಳಿದೆ. ಆ ಬದಲಾವಣೆಗಳನ್ನು ಒಮ್ಮೆ ಗಮನಿಸೋಣ. ಒಂದು ಕಾಲದಲ್ಲಿ ಸುದ್ದಿ ಪ್ರಸಾರ ಅಥವಾ ಮನರಂಜನೆಯ ಕಾರ್ಯಕ್ರಮಗಳಿಗೆ ಸರ್ಕಾರಿ ಒಡೆತನದ ದೂರದರ್ಶನ, ಆನಂತರ ಬಂದ ಖಾಸಗಿ ಟಿವಿ ವಾಹಿನಿಗಳು ಏಕೈಕ ವೇದಿಕೆಯಾಗಿದ್ದವು. ಈ ಸಂಸ್ಥೆಗಳಲ್ಲಿ ಸಾಮಾನ್ಯ ಪ್ರತಿಭೆಗೆ ವೇದಿಕೆ ಸಿಗುವುದು ಬಹು ಕಷ್ಟಕರವಾಗಿತ್ತು. ಆದರೆ, ಯೂಟ್ಯೂಬ್ ಇದನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಇದು ಕೇವಲ ವೀಡಿಯೊ ಹಂಚಿಕೆಯ ವೇದಿಕೆಯಾಗಿ ಉಳಿದಿಲ್ಲ; ಒಬ್ಬ ಸಾಮಾನ್ಯ ವ್ಯಕ್ತಿ ಕೂಡ ವೀಡಿಯೊ ಲಾಗಿಂಗ್ (Vlogging) ಮೂಲಕ ಕಾರ್ಯಕ್ರಮಗಳನ್ನು ನಡೆಸಿಕೊಡಬಹುದು. ತಮ್ಮದೇ ಆದ ಚಾನೆಲ್ ಸೃಷ್ಟಿಸಿ ಅಡುಗೆ, ನೃತ್ಯ, ವಾರ್ತೆ ಅಥವಾ ತಮ್ಮ ಇಷ್ಟದ ಯಾವುದೇ ವಿಷಯವನ್ನು ವೃತ್ತಿಪರ ಗುಣಮಟ್ಟದೊಂದಿಗೆ ಪ್ರದರ್ಶಿಸಬಹುದು. ಇಂದು ಲಕ್ಷಾಂತರ ಜನರು ಯೂ...

ಎಲೆಕ್ಟ್ರಾನಿಕ್ಸ್ ಸಿಟಿ Vs ದೊಡ್ಡತೋಗೂರು — ಎರಡು ವ್ಯವಸ್ಥೆಗಳ ಕಥೆ

Image
  ದೊಡ್ಡತೋಗೂರು vs. ಎಲೆಕ್ಟ್ರಾನಿಕ್ಸ್ ಸಿಟಿ: ಒಂದು ವ್ಯವಸ್ಥೆ ಹೇಗಿರಬೇಕು? ಬೆಂಗಳೂರಿನ (ಅಥವಾ ಯಾವುದೇ ನಗರದ) ಅಭಿವೃದ್ಧಿ ಮಾದರಿಗಳು ಹೇಗಿರಬೇಕು ಮತ್ತು ಹೇಗಿರಬಾರದು ಎಂಬುದಕ್ಕೆ ಒಂದು ಜೀವಂತ ಉದಾಹರಣೆ ಬೇಕಿದ್ದರೆ, ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಅದರ ಪಕ್ಕದಲ್ಲಿರುವ ದೊಡ್ಡತೋಗೂರನ್ನು ನೋಡಬೇಕು. ಈ ಎರಡೂ ಸ್ಥಳಗಳು ಅಕ್ಕಪಕ್ಕದಲ್ಲಿಯೇ ಇರುವುದು ನಿಜಕ್ಕೂ ಆಶ್ಚರ್ಯಕರ ಮತ್ತು ಚಿಂತನೀಯ ವಿಷಯ. 🌟 ಎಲೆಕ್ಟ್ರಾನಿಕ್ಸ್ ಸಿಟಿ ಮಾದರಿ: ಶಿಸ್ತು ಮತ್ತು ಸ್ವಾವಲಂಬನೆ ಉತ್ತಮ ರಸ್ತೆಗಳು: ಇಲ್ಲಿ ಗುಂಡಿ ಮುಕ್ತ, ಚೆಂದದ ರಸ್ತೆಗಳಿವೆ. ಸುಗಮ ಸಂಚಾರ: ವಾಹನ ಸವಾರರಿಗೆ ಕಿರಿಕಿರಿಯಿಲ್ಲದ ಟ್ರಾಫಿಕ್ ಸಿಗ್ನಲ್‌ಗಳು, ಅಡ್ಡಾದಿಡ್ಡಿ ಸಂಚಾರವನ್ನು ತಡೆಯಲು ಪ್ರತಿ ಸಿಗ್ನಲ್‌ನಲ್ಲಿರುವ ಪೊಲೀಸ್ ಸಿಬ್ಬಂದಿ ಮತ್ತು ಸೆಕ್ಯೂರಿಟಿ ಗಾರ್ಡ್‌ಗಳು. ಪಾದಚಾರಿ ಸ್ನೇಹಿ: ಪಾದಚಾರಿಗಳಿಗಾಗಿ ಅಚ್ಚುಕಟ್ಟಾದ ಫುಟ್‌ಪಾತ್‌ಗಳು. ಆಧುನಿಕ ಸೌಲಭ್ಯಗಳು: ಹೈಟೆಕ್ ಬಸ್ ನಿಲ್ದಾಣಗಳು ಮತ್ತು ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ. ಈ ವ್ಯವಸ್ಥಿತ ನಿರ್ವಹಣೆಯ ಹಿಂದೆ ಇರುವುದು ಸರ್ಕಾರಿ ಸಂಸ್ಥೆಯಲ್ಲ, ಬದಲಿಗೆ ELCITA (Electronics City Industrial Township Authority) ಎಂಬ ಸಂಸ್ಥೆ. ಅವರು ಸರ್ಕಾರದ ನೆರವಿಲ್ಲದೆ, ಬಹುರಾಷ್ಟ್ರೀಯ ಕಂಪನಿಗಳಿಂದ ನಿರ್ವಹಣಾ ವೆಚ್ಚವನ್ನು ಸಂಗ್ರಹಿಸಿ, ಅದನ್ನು ಸಂಪೂರ್ಣವಾಗಿ ಈ ಪ್ರದೇಶದ ಅಭಿವೃದ್ಧಿಗೆ ಬಳಸುತ್ತಿದ್ದ...

ಇಷ್ಟಪಡದವರಿಗೆ ಸಾವಿರ ಕಾರಣ; ಪ್ರೀತಿಸುವವರಿಗೆ ಲಕ್ಷ ಕಾರಣ—ಇದು ನಮ್ಮ ಬೆಂಗಳೂರು!

Image
ನಾಡಪ್ರಭು ಕೆಂಪೇಗೌಡರು ಹಾಕಿದ ಗಡಿಯನ್ನು ಮೀರಿ ಬೆಂಗಳೂರು ಇಂದು ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ನಗರಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ಇಡೀ ಜಗತ್ತಿನಲ್ಲಿ ಹೆಚ್ಚು ಸಂಚಾರದಟ್ಟಣೆ (Traffic congestion) ಇರುವ ನಗರಗಳ ಪಟ್ಟಿಯಲ್ಲಿಯೂ ಬೆಂಗಳೂರು ಸ್ಥಾನ ಪಡೆದಿದೆ ಎಂಬುದು ಬೇಸರದ ಸಂಗತಿ. ಕ್ಷಣಾರ್ಧದಲ್ಲಿ ಊಟ ಅಥವಾ ಇತರ ವಸ್ತುಗಳನ್ನು ಮನೆಗೆ ತಲುಪಿಸುವ ಸಲುವಾಗಿ ಇಲ್ಲಿನ ಬುದ್ಧಿವಂತ ಯುವಕರು ಪ್ರತಿ ದಿನ ಸಾವಿರಾರು ಅಪ್ಲಿಕೇಶನ್‌ಗಳನ್ನು ಸ್ಟಾರ್ಟ್ ಅಪ್ ಕಂಪನಿಗಳಿಗೆ ಮಾಡಿಕೊಡುತ್ತಾರೆ. ಆದರೆ ತಾವುಗಳೇ ಮನೆಗೆ ತೆರಳಲು ಗಂಟೆಗಟ್ಟಲೆ ಪರದಾಡುತ್ತಾರೆ ಎಂಬುದು ಎಷ್ಟು ಸತ್ಯವೋ ಅಷ್ಟೇ ವಿಚಿತ್ರ ಕೂಡ. ಬೆಂಗಳೂರನ್ನು ಇಷ್ಟಪಡದೆ ಇರಲು ಸಾವಿರ ಕಾರಣ ಇರಬಹುದು, ಆದರೆ ಈ ನಗರವನ್ನು ಪ್ರೀತಿಸುವುದಕ್ಕೆ ಲಕ್ಷ ಕಾರಣಗಳಿವೆ! ಬೆಂಗಳೂರಿನ ಹೊರವಲಯ IT ಕ್ರಾಂತಿಯಿಂದಾಗಿ ಅತಿ ಹೆಚ್ಚು ಜನ ಸಾಂದ್ರತೆ, ಸಂಚಾರ ದಟ್ಟಣೆ ಮತ್ತು ಅನಿರೀಕ್ಷಿತ ಬೆಳವಣಿಗೆ ಇಂದ ಬಳಲಿ ಬೆಂಡಾಗಿದೆ ನಿಜ. ಆದರೆ ಹಳೆ ಬೆಂಗಳೂರು ನಿಜಕ್ಕೂ ಸುಂದರ. ಬೆಂಗಳೂರಿನ ಎರಡು ಕಣ್ಣುಗಳು ಎಂದೇ ಕರೆಯಬಹುದಾದ ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್ ನಗರದ ಹೃದಯ ಭಾಗದಲ್ಲಿರುವ ಎರಡು ಬೃಹತ್ ಉದ್ಯಾನವನಗಳಾಗಿವೆ. ಇವು ನಮ್ಮ ಉಸಿರು ಇದ್ದಂತೆ. ಇಲ್ಲಿ ಮ್ಯಾರಥಾನ್, ಸಂಚಾರಿ ನಾಟಕಗಳು, ಡಾಗ್ ಶೋ ಮುಂತಾದ ಚಟುವಟಿಕೆಗಳು ಪ್ರತಿ ವಾರ ನಡೆಯುತ್ತವೆ. ವಾರಾಂತ್ಯದಲ...

ದಿ ಫ್ಯಾಮಿಲಿ ಮ್ಯಾನ್ ಕುರಿತು ವಸ್ತುನಿಷ್ಠ ವಿಮರ್ಶೆ

Image
ಕೆಲವೊಂದು ಸಿನಿಮಾಗಳು, ಪುಸ್ತಕಗಳು, ಅಥವಾ ವೆಬ್ ಸರಣಿಗಳು ನಮ್ಮನ್ನು ಅಕ್ಷರಶಃ ಸೂಜಿಗಲ್ಲಿನಂತೆ ಸೆಳೆದುಬಿಡುತ್ತವೆ. ಭಾರತದಲ್ಲಿ OTT ಯುಗ ಆರಂಭವಾದ ಮೇಲೆ ಹಲವು ವೆಬ್ ಸರಣಿಗಳು ಬಂದಿದ್ದರೂ, ಎಲ್ಲಕ್ಕಿಂತ ಹೆಚ್ಚು ಜನಪ್ರಿಯತೆ ಗಳಿಸಿದ ಸರಣಿ ಎಂದರೆ, ಅದು ನಿಸ್ಸಂದೇಹವಾಗಿ "ದಿ ಫ್ಯಾಮಿಲಿ ಮ್ಯಾನ್" ಎನ್ನಬಹುದು. ಮನೋಜ್ ಬಾಜಪೇಯಿ ಅವರು ನಿರ್ವಹಿಸಿದ ಶ್ರೀಕಾಂತ್ ತಿವಾರಿ ಪಾತ್ರವು, ಸರಕಾರದ ಗುಪ್ತಚಾರ ಇಲಾಖೆಯಲ್ಲಿ (T.A.S.C) ಬೇಹುಗಾರನಾಗಿ ಕೆಲಸ ಮಾಡುವ ವೃತ್ತಿಪರ ಜೀವನದ ಒತ್ತಡದ ಜೊತೆಗೆ, ತನ್ನ ಸಾಮಾನ್ಯ ಸಾಂಸಾರಿಕ ಜೀವನದ ಸವಾಲುಗಳನ್ನೂ ನಿಭಾಯಿಸಬೇಕಾದ ಹೋರಾಟವನ್ನು ಮೊದಲ ಎರಡು ಸರಣಿಗಳಲ್ಲಿ ಅದ್ಭುತವಾಗಿ ಚಿತ್ರಿಸಿತ್ತು. ಮೊದಲ ಸರಣಿ: ಮುಸ್ಲಿಂ ಭಯೋತ್ಪಾದಕರ ಬಗ್ಗೆ ಗಮನಹರಿಸಿತ್ತು. ಎರಡನೇ ಸರಣಿ: ಶ್ರೀಲಂಕಾದ ತಮಿಳು ಬಂಡಾಯಗಾರರ ಹಿನ್ನೆಲೆಯನ್ನು ಹೊಂದಿತ್ತು. ಈ ಎರಡೂ ಸರಣಿಗಳಲ್ಲಿ ದೇಶ ಸೇವೆ ಮತ್ತು ವೈಯಕ್ತಿಕ/ಸಾಂಸಾರಿಕ ಸವಾಲುಗಳು ಸರಿಸಮವಾಗಿ ಸಾಗುತ್ತಾ, ಕಥೆಯನ್ನು ರೋಚಕ ತಿರುವುಗಳಿಗೆ ಕೊಂಡೊಯ್ದಿದ್ದವು. 🔥 ನಿರೀಕ್ಷೆ ಹುಸಿ ಮಾಡಿದ ಮೂರನೇ ಸರಣಿ ಆದರೆ, ನವೆಂಬರ್ 21 ರಂದು ಪ್ರೈಮ್ ವಿಡಿಯೋದಲ್ಲಿ ಪ್ರಸಾರ ಆರಂಭಿಸಿದ ದಿ ಫ್ಯಾಮಿಲಿ ಮ್ಯಾನ್‌ನ ಮೂರನೇ ಸರಣಿ ಯು ತೀವ್ರ ನಿರಾಸೆಯನ್ನುಂಟು ಮಾಡಿದೆ. ಮೊದಲ ಎರಡು ಸರಣಿಗಳಲ್ಲಿ ಇದ್ದ ಕೂತೂಹಲ, ತೀವ್ರತೆ ಮತ್ತು ಕಥೆಯ ಮೇಲಿನ ಹಿಡಿತ ಮೂರನೇ ಭಾಗದಲ್ಲಿ ಸಂಪೂರ...

ಬೆಂಗಳೂರು ಸುತ್ತಮುತ್ತ ಚಾರಣ — ಪ್ರಕೃತಿ, ಪರಂಪರೆ ಮತ್ತು ಕೋಟೆಗಳ ಸಂಚಾರ

Image
ಬೆಂಗಳೂರು ಸುತ್ತಮುತ್ತ ಚಾರಣ ಮಾಡಲು ಅನೇಕ ಅದ್ಭುತ ಸ್ಥಳಗಳಿವೆ. ಬಂಡೆಗಳಿಂದ ಕೂಡಿದ ಬೆಟ್ಟಗಳು, ಏಕಶಿಲಾ ರಚನೆಗಳು ಮತ್ತು ಇತಿಹಾಸದ ಸುಳಿವುಗಳನ್ನು ಹೊತ್ತಿರುವ ಕೋಟೆಗಳು — ಇವೆಲ್ಲವೂ ಚಾರಣಪ್ರಿಯರ ಮನಸೆಳೆಯುವ ವೈಶಿಷ್ಟ್ಯಗಳು. ಹೊಯ್ಸಳ ಹಾಗೂ ವಿಜಯನಗರ ಸಾಮ್ರಾಜ್ಯದ ಕಾಲದಿಂದಲೇ ಈ ಪ್ರದೇಶಗಳಲ್ಲಿ ಸಾಮಂತರು ತಮ್ಮ ಆಡಳಿತ ಮತ್ತು ರಕ್ಷಣೆಗೆ ಅನೇಕ ಬೆಟ್ಟಗಳ ಮೇಲೆ ಕೋಟೆಗಳನ್ನು ಕಟ್ಟಿದ್ದರು. ಇಂದು ಅದರ ಅವಶೇಷಗಳನ್ನು ನೆನಪಿನ ಗುರುತುಗಳಂತೆ ನೋಡಬಹುದು. ನಂದಿ ಬೆಟ್ಟದಲ್ಲಿರುವ ಟಿಪ್ಪು ಸುಲ್ತಾನ್ ಅರಮನೆ ಹಾಗೂ “ಟಿಪ್ಪು ಡ್ರಾಪ್’’ ಎನ್ನುವ ಸ್ಥಳ ಅದಕ್ಕೆ ಜೀವಂತ ಸಾಕ್ಷಿ. ಅದೇ ರೀತಿ ನಂದಿ ಬೆಟ್ಟದಂತೆ ಆಹ್ಲಾದಕರ ವಾತಾವರಣ ಹೊಂದಿರುವ ಸ್ಕಂದಗಿರಿ ಚಾರಣಿಗರ ಹೃದಯದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಗುಡಿಬಂಡೆ, ಸಾವನದುರ್ಗ, ಹುತ್ತರಿ ಬೆಟ್ಟ, ದೇವರಾಯನದುರ್ಗಾ—ಇವೆಲ್ಲಾ ನಮ್ಮ ಅತೀತ ರಾಜವಂಶಗಳ ಕೋಟೆ ಕಟ್ಟುವ ಪರಂಪರೆಯನ್ನು ಹೆಮ್ಮೆಯಿಂದ ಸಾರುತ್ತವೆ. ಕೆಲವು ಗಟ್ಟಿಮುಟ್ಟಾಗಿ ಉಳಿದಿದ್ದರೆ, ಕೆಲವೆಡೆ ಕಾಲದ ಹೊಡೆತಕ್ಕೆ ಶಿಥಿಲಾವಸ್ಥೆ ಬಂದಿದೆ. ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆ ಕೆಲವು ಬೆಟ್ಟಗಳನ್ನು “ Eco Tourism’ ’ ಅಡಿಯಲ್ಲಿ ಗುರುತಿಸಿ ಉತ್ತಮ ನಿರ್ವಹಣೆಯತ್ತ ಹೆಜ್ಜೆ ಹಾಕುತ್ತಿದೆ. ಇದರಿಂದ ಅನೈತಿಕ ಚಟುವಟಿಕೆಗಳು ಕಡಿಮೆಯಾಗಿದ್ದು, ಚಾರಣಿಗರು ತಪ್ಪಿಹೋಗುವ ಘಟನೆಗಳು ಸಹ ಇಳಿಮುಖವಾಗಿವೆ. ಆದರೆ ಇನ್ನೂ ಉತ್ತಮ ಮಾರ್ಗಸೂಚನೆ...

ನಮ್ಮ ರಸ್ತೆ ಹೆಸರುಗಳ ಕತೆ ಮತ್ತು ವ್ಯಥೆ

Image
ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಗೆ ಹೊಂದಿಕೊಂಡಂತೆ ನೀಲಾದ್ರಿ ಎಂಬ ಪ್ರಸಿದ್ಧ ರಸ್ತೆ ಇದೆ, ಈಗ ಈ ರಸ್ತೆಗೆ ಬೆಂಗಳೂರು ಗ್ರಾಮೀಣ ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾದ ಡಿ.ಕೆ. ಸುರೇಶ್ ರಸ್ತೆ ಎಂದು ಮರುನಾಮಕರಣ ಮಾಡಲಾಗಿದೆ. 'ನೀಲಾದ್ರಿ' ಎಂತಹ ಸುಂದರ ಹೆಸರು! ನಗರೀಕರಣವಾಗುವ ಮುನ್ನ ಅಲ್ಲಿದ್ದ 'ನೀಲಾದ್ರಿ Amusement Water Park' ಕಾರಣಕ್ಕೆ ಜನಬಳಕೆಯಲ್ಲಿ ಆ ಹೆಸರು ಬಂದಿತ್ತು. ಜನರ ಬಾಯಲ್ಲಿ ಹುಟ್ಟಿ, ಆ ಸ್ಥಳದ ಇತಿಹಾಸವನ್ನು ಸಾರುತ್ತಿದ್ದ ಒಂದು ಸೊಗಸಾದ ಹೆಸರನ್ನು ಬದಲಿಸಿದ್ದು, ಅಲ್ಲಿನ ಹಿಂದಿನ ನೆನಪುಗಳನ್ನು ಅಳಿಸಿಹಾಕಿದಂತಿದೆ. ಮೈಸೂರಿನ ಕುವೆಂಪು ನಗರ: ಹೆಸರುಗಳ ಮಾಧುರ್ಯ ಇಂತಹ ಸಂದರ್ಭಗಳಲ್ಲಿ, ನಾನು ಬೆಳೆದ ಮೈಸೂರಿನ ಕುವೆಂಪು ನಗರದ ರಸ್ತೆಗಳ ಹೆಸರುಗಳು ನನಗೆ ನೆನಪಾಗುತ್ತವೆ. ಅಲ್ಲಿನ ರಸ್ತೆಗಳ ಹೆಸರುಗಳನ್ನು ರಾಷ್ಟ್ರಕವಿ ಕುವೆಂಪು ಅವರ ಪುಸ್ತಕಗಳು, ಕಥೆಗಳು ಅಥವಾ ಕವಿತೆಗಳಲ್ಲಿ ಬಂದ ಜನಪ್ರಿಯ ಹೆಸರುಗಳಿಂದ ಆರಿಸಲಾಗಿದೆ. ಅನಿಕೇತನ ರಸ್ತೆ ನವಿಲು ರಸ್ತೆ ಪಾರಿಜಾತ ರಸ್ತೆ ಉದಯರವಿ ರಸ್ತೆ ವಿಶ್ವ ಮಾನವ ಜೋಡಿ ರಸ್ತೆ ಪಂಚಮಂತ್ರ ರಸ್ತೆ ಈ ಹೆಸರುಗಳು ಕೇವಲ ಫಲಕಗಳಲ್ಲ; ಅವು ಮೈಸೂರಿನಷ್ಟೇ ಮಧುರ ಮತ್ತು ಆಪ್ತವಾಗಿವೆ. ಈ ರಸ್ತೆಗಳಲ್ಲಿ ಓಡಾಡುವಾಗ ಆಗುವ ಆನಂದವೇ ಒಂದು ಅನನ್ಯ ಅನುಭವ. ಒಂದು ಸಾಹಿತ್ಯಕ ಸ್ಪರ್ಶ, ಸಾಂಸ್ಕೃತಿಕ ನೆನಪು ಆ ರಸ್ತೆಗಳಿಗಿದೆ. ಇಂದಿನ ಪರಸ್ಥಿತಿ — ಹೆಸರಿನಲ್ಲಿ ರಾಜಕೀಯ ...

Yellow ಮೆಟ್ರೋ ಲೈನ್ ಪ್ರಯಾಣದ ಅನುಭವ: ಸಮಯಪಾಲನೆ ಮತ್ತು ಕಾರ್ಯದಕ್ಷತೆ ಒಂದು ವಿಸ್ಮಯ!

Image
ನಾನು ಇತ್ತೀಚೆಗೆ ಬೆಂಗಳೂರಿನ ಯೆಲ್ಲೋ ಮೆಟ್ರೋ ಲೈನ್‌ನಲ್ಲಿ (Yellow Metro Line) ಪ್ರಯಾಣಿಸಿದಾಗ, ಒಂದು ಕ್ಷಣ ಮೂಕವಿಸ್ಮಿತನಾದೆ. ನಮ್ಮ ಬೆಂಗಳೂರಿನ ಸಾರ್ವಜನಿಕ ಸಾರಿಗೆಯಲ್ಲಿ ಈ ಮಟ್ಟದ  ಸಮಯಪಾಲನೆ (Punctuality) ಮತ್ತು ಕಾರ್ಯದಕ್ಷತೆ ಸಾಧ್ಯವೇ ಎಂದು ಆಶ್ಚರ್ಯವಾಯಿತು! ಇದಕ್ಕೆ ಮೊದಲು ನನಗೆ ನೆನಪಾಗಿದ್ದು ನಟ-ನಿರ್ದೇಶಕ ಉಪೇಂದ್ರ ಅವರ 'ಆಪರೇಷನ್ ಅಂತ' ಚಿತ್ರದ ಒಂದು ದೃಶ್ಯ. ಆ ದೃಶ್ಯದಲ್ಲಿ, ಅಮೆರಿಕದಿಂದ ಬಂದ ನಾಯಕಿ ಬಸ್‌ಗಾಗಿ ಕಾಯುತ್ತಾ ನಿಂತಿರುತ್ತಾಳೆ. ಆದರೆ ಬಸ್ ಸಮಯಕ್ಕೆ ಬರುವುದಿಲ್ಲ, ಅಲ್ಲದೆ ಬಸ್ ನಿಲುಗಡೆಗೆ ಕಾಯ್ದಿರಿಸಿದ ಜಾಗದಲ್ಲಿಯೂ ನಿಲ್ಲುವುದಿಲ್ಲ. ಆಗ ಅಲ್ಲೇ ನಿಂತಿದ್ದ ಸ್ಥಳೀಯ ಪ್ರಯಾಣಿಕನನ್ನು ನಾಯಕಿ ಕೇಳಿದಾಗ ಆತ ಹೇಳುವ ಮಾತು: "BTS (ಬಿಎಂಟಿಸಿ ಹಳೆಯ ಹೆಸರು) ಅಂದರೆ,  ಬಿಟ್ಟರೆ ತಿರುಗಿದರೂ ಸಿಗಲ್ಲ! " ನಾವು ಸಣ್ಣವರಾಗಿದ್ದಾಗ(ಬಾಲ್ಯದಲ್ಲಿದ್ದಾಗ), ಜಪಾನ್‌ನಂತಹ ದೇಶಗಳಲ್ಲಿ ರೈಲು ಅಥವಾ ಬಸ್ಸುಗಳು ಒಂದು ನಿಮಿಷ ಇರಲಿ, ಒಂದು ಸೆಕೆಂಡ್ ಕೂಡ ತಡವಾಗಿ ಬರುವುದಿಲ್ಲ ಎಂದು ಕೇಳಿ ಆಶ್ಚರ್ಯವಾಗುತ್ತಿತ್ತು. ನಮ್ಮ ಭಾರತದ ರೈಲುಗಳು ಹಿಂದೆ ಗಂಟೆಗಟ್ಟಳೆ ತಡವಾಗುತ್ತಿದ್ದವು (ಈಗ ಪರಿಸ್ಥಿತಿ ಸುಧಾರಿಸಿರಬಹುದು, ಆದರೆ ನಗರ ಸಾರಿಗೆ ಬಸ್ಸುಗಳಂತೂ ಸಮಯಕ್ಕೆ ಬಂದಿದ್ದು ನಾನು ನೋಡಿಯೆ ಅಥವಾ ಕೇಳಿಯೆ ಇಲ್ಲ). ಇಂದಿಗೂ ಅನೇಕ ಹಳ್ಳಿಗಳಿಗೆ ಬೆಳಗ್ಗೆ ಮತ್ತು ಸಾಯಂಕಾಲ ಮಾತ್ರ ಬಸ್ ಇವೆ ಎಂಬ...

ಹಳೆಯ ಮೈಸೂರು–ಬೆಂಗಳೂರು ಹೆದ್ದಾರಿಯ ನೆನಪುಗಳು

Image
ಮೈಸೂರು ಮತ್ತು ಬೆಂಗಳೂರಿನ ನಡುವೆ ಇಂದು ಎಕ್ಸ್ ‌ ಪ್ರೆಸ್ ‌ ಹೈವೇ ನಿರ್ಮಾಣವಾಗಿದೆ .  ಆರು ಪಥದ ಈ ಹೆದ್ದಾರಿ ಎರಡೂ ಬದಿಯ ಸರ್ವಿಸ್ ‌ ರಸ್ತೆಗಳೊಂದಿಗೆ ಆಧುನಿಕತೆಯ ಒಂದು ಚಿಹ್ನೆಯಾಗಿದೆ . ಆದರೆ ಒಂದು ಕಾಲದಲ್ಲಿ ಬೆಂಗಳೂರು ಮತ್ತು ಮೈಸೂರಿನ ನಡುವೆ ಕೇವಲ ಎರಡು ಪಥ ರಸ್ತೆಯ ಹೆದ್ದಾರಿ ಇತ್ತು.   ನಂತರ ಅದು ನಾಲ್ಕು ಪಥದ ರಸ್ತೆಯಾಗಿ ರೂಪಾಂತರಗೊಂಡಿತು . ಈ ಹಳೆ ಹೆದ್ದಾರಿ ಇತರೆ ಹೆದ್ದಾರಿಗಳಿಗಿಂತ ವಿಶಿಷ್ಟ ಹಾಗು ವಿಭಿನ್ನ — ಯಾಕೆಂದರೆ ಈ ಹೆದ್ದಾರಿಯಲ್ಲಿ ಸಿಗುವ ಪ್ರತಿಯೊಂದೂ   ಊರುಗಳು ವಿಶಿಷ್ಟ ಕಥೆಗಳನ್ನು ಹೇಳುತ್ತವೆ . 🌇 ಬಿಡದಿ ತಟ್ಟೆ ಇಡ್ಲಿ ಬೆಂಗಳೂರಿನಿಂದ ಮೈಸೂರಿಗೆ ಹೋಗುವಾಗ ಸಿಗುವ ಮೊದಲ ಊರು ಬಿಡದಿ.   ಇಲ್ಲಿನ ತಟ್ಟೆ ಇಡ್ಲಿ ಈಗಲೂ ಜನಪ್ರಿಯ . ರೇಣುಕಾಂಬ ಹೋಟೆಲ್ ಹಾಗೂ ಶ್ರೀ ಶಿವದರ್ಶನ ಹೋಟೆಲ್ ಅಲ್ಲಿ ಸಿಗುವ ತಟ್ಟೆ ಇಡ್ಲಿ ಸವಿಯಲು ಬೇರೆ ಊರುಗಳಿಂದ ಇವತ್ತಿಗೂ ಜನರು ಬರುತ್ತಾರೆ. 🐛 ರಾಮನಗರ — ರೇಷ್ಮೆ ನಾಡು ಮುಂದೆ ಸಿಗುವುದು ರಾಮನಗರ . ಒಮ್ಮೆ ರೇಷ್ಮೆ ಬೆಳೆಗೆ ಪ್ರಸಿದ್ಧವಾಗಿದ್ದ ಈ ಊರು ಇಂದಿಗೂ ಆ ಪರಂಪರೆಯನ್ನು ಹಿಡಿದಿಟ್ಟುಕೊಂಡಿದೆ . ಜಾನಪದ ಲೋಕದ ಪಕ್ಕದಲ್ಲಿ ಇರುವ ಕಾಮತ್ ಲೋಕರುಚಿ ಅಲ್ಲಿ ಸಿಗುವ ಉತ್ತರ ಕರ್ನಾಟಕದ ಊಟ ಸವಿಯಲು ಇಂದಿಗೂ ಬೆಂಗಳೂರಿನಿಂದ ಜನ ಬರುತ್ತಾರೆ ...