Posts

Showing posts from December, 2025

ಭಾರತದ ಲಿಟಲ್ ಫ್ರಾನ್ಸ್: ಪುದುಚೇರಿ – ಇತಿಹಾಸ, ವೈಪರೀತ್ಯ ಮತ್ತು ಜೀವನದ ವಿಪರ್ಯಾಸ

Image
ಭಾರತದ ಭೂಪಟದಲ್ಲಿ ಪುದುಚೇರಿ ಎನ್ನುವುದು ಕೇವಲ ಒಂದು ಕೇಂದ್ರಾಡಳಿತ ಪ್ರದೇಶವಲ್ಲ; ಅದು ಇತಿಹಾಸದ ಪುಟಗಳು ಮತ್ತು ಆಧುನಿಕ ಜೀವನದ ವೈಪರೀತ್ಯಗಳು ಸಂಗಮಿಸುವ ಒಂದು ವಿಶಿಷ್ಟ ತಾಣ. 1947ರಲ್ಲಿ ಬ್ರಿಟಿಷರಿಂದ ನಮಗೆ ಸ್ವಾತಂತ್ರ್ಯ ಸಿಕ್ಕರೂ, ಈ ಪುಟ್ಟ ಪ್ರಾಂತ್ಯ ಮಾತ್ರ 1954ರವರೆಗೆ ಫ್ರಾನ್ಸ್ ಆಡಳಿತದಲ್ಲೇ ಉಳಿದಿತ್ತು. 1962ರಲ್ಲಿ ಅಧಿಕೃತವಾಗಿ ಭಾರತದ ಕೇಂದ್ರಾಡಳಿತ ಭಾಗವಾದ ಪುದುಚೇರಿ, ಇಂದಿಗೂ ತನ್ನೊಡಲಲ್ಲಿ ಫ್ರೆಂಚ್ ಸಂಸ್ಕೃತಿಯನ್ನು ಜೀವಂತವಾಗಿರಿಸಿಕೊಂಡಿದೆ. ವೈಟ್ ಟೌನ್: ಕಾಲದ ಹಾದಿಯಲ್ಲಿ ಒಂದು ಪಯಣ ಪುದುಚೇರಿಯ 'ವೈಟ್ ಟೌನ್' (White Town) ಅಥವಾ ಫ್ರೆಂಚ್ ಕಾಲೋನಿಯಲ್ಲಿ ಹೆಜ್ಜೆ ಹಾಕಿದರೆ ನಾವು ಭಾರತದಲ್ಲಿದ್ದೇವೋ ಅಥವಾ ಫ್ರಾನ್ಸ್‌ನ ಯಾವುದೋ ಹಳೆಯ ಬೀದಿಯಲ್ಲಿದ್ದೇವೋ ಎಂಬ ಭ್ರಮೆ ಉಂಟಾಗುತ್ತದೆ.ಇಂದಿಗೂ ಸಹ ಕಾಲೋನಿಯಲ್ ಫ್ರಾನ್ಸ್ ಕುರುಹುಗಳು ಈ ಪ್ರದೇಶದಲ್ಲಿಇದೆ. ವಾಸ್ತುಶಿಲ್ಪ: ಸಾಲು ಸಾಲಾದ ಹಳದಿ ಬಣ್ಣದ ಫ್ರೆಂಚ್ ಕಾಲೋನಿಯಲ್ ಶೈಲಿಯ ಕಟ್ಟಡಗಳು. ರುಚಿ: ಅಧಿಕೃತ ಫ್ರೆಂಚ್ ಶೈಲಿಯ ಬೇಕರಿಗಳು ಮತ್ತು ಕೆಫೆಗಳು. ಬದಲಾವಣೆ: ಹಿಂದೆ ವಸತಿಗೃಹಗಳಾಗಿದ್ದ ಅನೇಕ ಫ್ರೆಂಚ್ ಮನೆಗಳು ಇಂದು ಐಷಾರಾಮಿ ಹೋಟೆಲ್‌ ಮತ್ತು ಕೆಫೆಗಳಾಗಿ ಮಾರ್ಪಟ್ಟಿವೆ. ಪ್ರಸಿದ್ಧ P romenade  (ರಾಕ್) ಬೀಚ್‌ ಗೆ ಹೊಂದಿಕೊಂಡಂತಿರುವ ಈ ಪ್ರದೇಶ ಅತ್ಯಂತ ಸುಸಜ್ಜಿತವಾಗಿದ್ದು, ಪ್ರವಾಸಿಗರ ಮೊದಲ ಆಯ್ಕೆಯಾಗಿದೆ. ಒಂದಷ್ಟು ಫ...

ಬಸವನಗುಡಿ: ಬೆಂಗಳೂರು ನಗರದ ಹೆಗ್ಗುರುತು

Image
ಬೆಂಗಳೂರು ಇಂದು 'ಸಿಲಿಕಾನ್ ಸಿಟಿ' ಆಗಿ ಜಗತ್ತಿನ ಭೂಪಟದಲ್ಲಿ ಗುರುತಿಸಿಕೊಂಡಿರಬಹುದು. ಆದರೆ, ಈ ಆಧುನಿಕ ಮೆಟ್ರೋಪಾಲಿಟನ್ ನಗರದ ಗದ್ದಲದ ನಡುವೆಯೂ ತನ್ನತನವನ್ನು, ಮಣ್ಣಿನ ಸೊಗಡನ್ನು ಮತ್ತು ಸಾಂಪ್ರದಾಯಿಕ ಮೌಲ್ಯಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡಿರುವ ಒಂದು ಪ್ರದೇಶವಿದ್ದರೆ ಅದು  ಬಸವನಗುಡಿ . ಹಬ್ಬಗಳ ತವರು ಈ ಬಸವನಗುಡಿ ಹಬ್ಬ ಹರಿದಿನ ಬಂತೆಂದರೆ ಬೆಂಗಳೂರಿನ ಕನ್ನಡಿಗರಿಗೆ ಮೊದಲು ನೆನಪಾಗುವುದೇ ಬಸವನಗುಡಿ. ಸಂಕ್ರಾಂತಿಯ ಸಕ್ಕರೆ ಅಚ್ಚು, ಎಳ್ಳು-ಬೆಲ್ಲದಿಂದ ಹಿಡಿದು ದೀಪಾವಳಿಯ ಒಬ್ಬಟ್ಟು,ಕಜ್ಜಾಯದವರೆಗೆ - ಹಬ್ಬದ ಪೂಜೆಗೆ ಬೇಕಾದ ಸಕಲ ಸಾಮಗ್ರಿಗಳೂ ಇಲ್ಲಿ ಲಭ್ಯ. ಇಂದಿನ ಧಾವಂತದ ಬದುಕಿನಲ್ಲಿ ತಿನಿಸುಗಳನ್ನು ತಯಾರಿಸಲು ಸಮಯವಿಲ್ಲದ ಆಧುನಿಕ ಮಹಿಳೆಯರಿಗೆ ಬ್ರಾಹ್ಮಣ ಕುಟುಂಬಗಳು ನಡೆಸುವ ಬೃಂದಾವನ ಸ್ಟೋರ್ಸ್, ಗುರು ರಾಘವೇಂದ್ರ ಸ್ಟೋರ್ಸ್ ಮತ್ತು ರಾಮ ಟ್ರೇಡರ್ಸ್‌ನಂತಹ ಅಂಗಡಿಗಳು ಲಭ್ಯವಿದೆ. ನಗರದೊಳಗಿನ ಒಂದು ಹಳ್ಳಿ ಬಸವನಗುಡಿಯನ್ನು 'ಬೆಂಗಳೂರಿನ ಒಳಗಿರುವ ಹಳ್ಳಿ' ಎನ್ನಬಹುದು. ಇಲ್ಲಿನ  ಕಡಲೇಕಾಯಿ ಪರಿಷೆ  ಹಳ್ಳಿಯ ಜಾತ್ರೆಯನ್ನೇ ನೆನಪಿಸುತ್ತದೆ. ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ನಡೆಯುವ ಪ್ರಸಿದ್ಧ  ಅವರೆಬೇಳೆ ಮೇಳ  ಮತ್ತು ಮೈಸೂರು ದಸರಾವನ್ನೂ ಮೀರಿಸುವಂತಹ  ಗಣೇಶೋತ್ಸವ  ಈ ಭಾಗದ ಸಾಂಸ್ಕೃತಿಕ ಮೆರುಗು. ಕಲೆ,ಸಾಹಿತ್ಯ,ಶಿಕ್ಷಣ,ಕ್ರೀಡೆ ಮತ್ತು ಸಾಂಸ್ಕೃತಿಕ ದಿಗ್ಗಜರ ನೆಲ...

ಕ್ರಿಕೆಟ್ ವೀಕ್ಷಕ ವಿವರಣೆ: ಕಿವಿಗೆ ಅಪ್ಪಳಿಸುವ ರಸದೌತಣ ಮತ್ತು ಮರೆಯಲಾಗದ ಧ್ವನಿಗಳು

Image
  ಕ್ರಿಕೆಟ್ ಎಂಬುದು ಕೇವಲ ಆಟವಲ್ಲ , ಅದೊಂದು ಭಾವನೆ . ಮೈದಾನದಲ್ಲಿ ಬ್ಯಾಟ್ ಮತ್ತು ಬಾಲ್ ನಡುವೆ ನಡೆಯುವ ಕಾಳಗಕ್ಕೆ ಜೀವ ತುಂಬುವುದು ಕಾಮೆಂಟೇಟರ್ ಬಾಕ್ಸ್ ‌ ನಿಂದ ಕೇಳಿಬರುವ ಆ ಧ್ವನಿಗಳು . ಹೌದು , ವೀಕ್ಷಕ ವಿವರಣೆ (Commentary) ಇಲ್ಲದ ಕ್ರಿಕೆಟ್ , ಉಪ್ಪಿಲ್ಲದ ಅಡುಗೆಯಂತೆ ನೀರಸ . ಆಸ್ಟ್ರೇಲಿಯಾದ ಆ ' ಬಾಕ್ಸಿಂಗ್ ಡೇ ' ಮತ್ತು ಚಾನೆಲ್ ೯ ವೈಭವ ಅದು 1999ರ ಡಿಸೆಂಬರ್ 26. ಮೆಲ್ಬೋರ್ನ್‌ನಲ್ಲಿ ನಡೆಯುತ್ತಿದ್ದ ಬಾಕ್ಸಿಂಗ್ ಡೇ ಟೆಸ್ಟ್ ಮ್ಯಾಚ್. ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಮತ್ತು ಶ್ರೇಷ್ಠ ಬೌಲರ್ ಗ್ಲೆನ್ Mcgrath ನಡುವೆ ನಡೆಯುತ್ತಿದ್ದ ಕಾಳಗ ಅದು. ಇದನ್ನು ಕೇವಲ ಕ್ರಿಕೆಟ್ ಕಾಳಗ ಎಂದರೆ ಸಾಲದು; and it was just pure poetry! ಕೆಟ್ಟ ಚೆಂಡುಗಳನ್ನು ಎಸೆಯದ ಬೌಲರ್ Mcgrath ಮತ್ತು ತಾಂತ್ರಿಕವಾಗಿ ಪರಿಪೂರ್ಣ ಬ್ಯಾಟ್ಸ್‌ಮನ್ ಸಚಿನ್—ಇಬ್ಬರ ನಡುವಿನ ಪೈಪೋಟಿ ನೋಡಲು ಎರಡು ಕಣ್ಣು ಸಾಲುತ್ತಿರಲಿಲ್ಲ. ಆ ಕ್ಷಣಗಳಿಗೆ ಇನ್ನಷ್ಟು ಮೆರಗು ನೀಡುತ್ತಿದ್ದವರು ಕಾಮೆಂಟೇಟರ್ ಬಾಕ್ಸ್‌ನಲ್ಲಿದ್ದ ದಿಗ್ಗಜರು—Richie Benaud, Tony Greig ಮತ್ತು Ian Chappell. ಅವರ ಮಾತುಗಳು ಆಟದಷ್ಟೇ ರೋಮಾಂಚನಕಾರಿಯಾಗಿದ್ದವು. ಆಸ್ಟ್ರೇಲಿಯಾದ ನೆಲದಲ್ಲಿ ನಡೆಯುವ ಕ್ರಿಕೆಟ್ ನೋಡುವುದು ಎಷ್ಟು ಸೊಗಸೋ, ಅಷ್ಟೇ ಸೊಗಸು ಅಂದಿನ ದಿನಗಳಲ್ಲಿ ಚಾನೆಲ್ 9ನ ವೀಕ್ಷಕ ವಿವರಣೆ...

ಅವರೇಕಾಳು ಮೇಳ ಮತ್ತು ವಿ.ವಿ. ಪುರಂ ತಿಂಡಿ ಬೀದಿ: ಒಂದು ಸೊಗಡು

Image
ಅವರೇಕಾಳು ಉಪ್ಪಿಟ್ಟು, ಅವರೇಕಾಳು ಪಲಾವ್, ಅವರೇಕಾಳು ದೋಸೆ, ಅವರೇಕಾಳು ಸಾಂಬಾರು, ಅವರೇಕಾಳು ಪಲ್ಯ, ಅವರೇಕಾಳು ರೊಟ್ಟಿ... ಚಳಿಗಾಲ ಆರಂಭವಾಗುತ್ತಿದ್ದಂತೆ, ಅದರಲ್ಲೂ ಡಿಸೆಂಬರ್-ಜನವರಿ ತಿಂಗಳು ಬಂತೆಂದರೆ, ನಮ್ಮ ಮನೆಯಲ್ಲಿ ಸರ್ವಂ ಅವರೇಕಾಳು ಮಯಂ! ದಕ್ಷಿಣ ಭಾರತದ, ಅದರಲ್ಲೂ ನಮ್ಮ ಬೆಂಗಳೂರಿನ ಆಹಾರ ಸಂಸ್ಕೃತಿಯಲ್ಲಿ ಅವರೆಕಾಳಿಗಿರುವ ಸ್ಥಾನ ಬಹಳ ವಿಶಿಷ್ಟ. ಬೆಂದಕಾಳೂರು ಮತ್ತು ಅವರೇಕಾಳಿನ ದಂತಕಥೆ ನಮ್ಮ ಬೆಂಗಳೂರು ಮತ್ತು ಅವರೆಕಾಳಿಗಿರುವ ಸಂಬಂಧ ಇಂದಿನದಲ್ಲ, ಅದು ಶತಮಾನಗಳಷ್ಟು ಹಳೆಯದು. ಜಾನಪದ ಅಥವಾ ಒಂದು ದಂತಕತೆಯ ಪ್ರಕಾರ, ಹೊಯ್ಸಳ ರಾಜ, ವೀರ ಬಲ್ಲಾಳ II ಅವರು ಇಂದಿನ ಬೆಂಗಳೂರು ಸುತ್ತ ಮುತ್ತ ಪ್ರದೇಶಕ್ಕೆ ಬೇಟೆಗಾಗಿ ಬಂದಾಗ, ಹಸಿವು ತೀರಿಸಿಕೊಂಡದ್ದು ಬೆಂದಕಾಳು ಅಂದರೆ ಅವರೇಕಾಳಿನಿಂದ. ಇದರ ರುಚಿಯಿಂದ ಪ್ರಭಾವಿತರಾದ ರಾಜ, ಈ ಪ್ರದೇಶವನ್ನು 'ಬೆಂದಕಾಳೂರು' ಎಂದು ಕರೆದನಂತೆ. ಮುಂದೆ ಇದೇ ಹೆಸರು ಪ್ರಸಿದ್ಧಿ ಪಡೆದು ಬೆಂಗಳೂರು ಆಗಿ ಬದಲಾಯಿತು. ಇಂದಿಗೂ ಸಹ ಬೆಂಗಳೂರಿನ ಸಮೀಪದ ಮಾಗಡಿ ಪ್ರದೇಶದಲ್ಲಿ ಬೆಳೆಯುವ ಅವರೇಕಾಳಿಗೆ ಇರುವ ಸೊಗಡು, ದಕ್ಷಿಣ ಭಾರತದ ಬೇರೆ ಎಲ್ಲೂ ಸಿಗುವುದಿಲ್ಲ. ಆ ಮಣ್ಣಿನ ವಾಸನೆ, ಆ ತಾಜಾತನ—ಅದು ಬೇರೆ ತರಹದ ಅನುಭವ. ಅವರೇಕಾಳು ಮೇಳ: ಒಂದು ಸೊಗಡಿನ ಕಥೆ ಈ ಅವರೆಕಾಳಿನ ಸವಿಯನ್ನು ಸಂಭ್ರಮಿಸಲು ಬೆಂಗಳೂರಿನಲ್ಲಿ ಪ್ರತಿ ವರ್ಷ ನಡೆಯುವ ಪ್ರಮುಖ ಘಟನೆ ಎಂದರೆ, ವಿ.ವಿ. ಪುರಂ/ಬಸವನಗುಡಿಯ...

ಸಾಮಾನ್ಯರ ಜೀವನದಲ್ಲಿ ಅಸಾಧಾರಣ ಬದಲಾವಣೆ ತಂದ ತಂತ್ರಜ್ಞಾನದ ಆಧುನಿಕ ವ್ಯವಸ್ಥೆ

Image
ಒಂದುವರೆ ದಶಕದ ಹಿಂದಿನ ನೋಟ: ೨೦೧೦ರಲ್ಲಿ ನಾನು ಬರೆದ ಒಂದು ಬ್ಲಾಗ್ ನೆನಪಿದೆ. ೨೦೦೧ ರಿಂದ ೨೦೧೦ರ ದಶಕವನ್ನು 'ಡಿಜಿಟಲ್ ದಶಕ' ಎಂದು ಬಣ್ಣಿಸಿದ್ದೆ. ಅದಕ್ಕೆ ತಕ್ಕಂತೆ, ಆ ದಶಕವು ಹಲವು ಕ್ರಾಂತಿಕಾರಿ ಬದಲಾವಣೆಗಳಿಗೆ ಸಾಕ್ಷಿಯಾಗಿತ್ತು. ಆರ್ಕುಟ್, ಫೇಸ್‌ಬುಕ್, ಟ್ವಿಟ್ಟರ್, ಯೂಟ್ಯೂಬ್ ನಂತಹ ಸಾಮಾಜಿಕ ಜಾಲತಾಣಗಳು ಜನ್ಮತಾಳಿದವು. ಜೊತೆಗೆ, ಭಾರತದಲ್ಲಿ ಸೆಲ್‌ಫೋನ್ ಪ್ರತಿಯೊಬ್ಬರ ಕೈಗೂ ತಲುಪಿ, ಸಂವಹನ ಕ್ರಾಂತಿಗೆ ನಾಂದಿ ಹಾಡಿತು. ಆದರೆ, ೨೦೧೦ರ ನಂತರದ ಈ ಒಂದುವರೆ ದಶಕದಲ್ಲಿ ತಂತ್ರಜ್ಞಾನವು ಇನ್ನೊಂದು ಮಹತ್ವದ ಮಗ್ಗುಲಿಗೆ ಹೊರಳಿದೆ. ಆ ಬದಲಾವಣೆಗಳನ್ನು ಒಮ್ಮೆ ಗಮನಿಸೋಣ. ಒಂದು ಕಾಲದಲ್ಲಿ ಸುದ್ದಿ ಪ್ರಸಾರ ಅಥವಾ ಮನರಂಜನೆಯ ಕಾರ್ಯಕ್ರಮಗಳಿಗೆ ಸರ್ಕಾರಿ ಒಡೆತನದ ದೂರದರ್ಶನ, ಆನಂತರ ಬಂದ ಖಾಸಗಿ ಟಿವಿ ವಾಹಿನಿಗಳು ಏಕೈಕ ವೇದಿಕೆಯಾಗಿದ್ದವು. ಈ ಸಂಸ್ಥೆಗಳಲ್ಲಿ ಸಾಮಾನ್ಯ ಪ್ರತಿಭೆಗೆ ವೇದಿಕೆ ಸಿಗುವುದು ಬಹು ಕಷ್ಟಕರವಾಗಿತ್ತು. ಆದರೆ, ಯೂಟ್ಯೂಬ್ ಇದನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಇದು ಕೇವಲ ವೀಡಿಯೊ ಹಂಚಿಕೆಯ ವೇದಿಕೆಯಾಗಿ ಉಳಿದಿಲ್ಲ; ಒಬ್ಬ ಸಾಮಾನ್ಯ ವ್ಯಕ್ತಿ ಕೂಡ ವೀಡಿಯೊ ಲಾಗಿಂಗ್ (Vlogging) ಮೂಲಕ ಕಾರ್ಯಕ್ರಮಗಳನ್ನು ನಡೆಸಿಕೊಡಬಹುದು. ತಮ್ಮದೇ ಆದ ಚಾನೆಲ್ ಸೃಷ್ಟಿಸಿ ಅಡುಗೆ, ನೃತ್ಯ, ವಾರ್ತೆ ಅಥವಾ ತಮ್ಮ ಇಷ್ಟದ ಯಾವುದೇ ವಿಷಯವನ್ನು ವೃತ್ತಿಪರ ಗುಣಮಟ್ಟದೊಂದಿಗೆ ಪ್ರದರ್ಶಿಸಬಹುದು. ಇಂದು ಲಕ್ಷಾಂತರ ಜನರು ಯೂ...