ಸ್ಟಾಕ್ ಮಾರ್ಕೆಟ್ ಎಂಬ ಮಾಯಾಜಾಲ


ಭಾರತದ ಮಧ್ಯಮ ವರ್ಗದ ಜನರಿಗೆ ಶೇರ್ ಮಾರ್ಕೆಟ್ ಅಂದ್ರೆ ಏನೋ ಒಂಥರಾ ಭಯ. ಸಾಕಷ್ಟು ವಿದ್ಯಾವಂತರೇ ಇರುವ ಈ ಮಧ್ಯಮ ವರ್ಗದಲ್ಲಿ, ರಿಸ್ಕ್ ಯಾಕೆ ಅಂತ ೯೦% ಜನ ಈ ಶೇರ್ ಮಾರ್ಕೆಟ್ ನಿಂದ ದೂರವೇ ಇದ್ದಾರೆ. ಬೇಕಾದರೆ ಗಮನಿಸಿ ನೋಡಿ, ಇವರೆಲ್ಲರೂ ಯಾವುದೇ ರಿಸ್ಕ್ ಇಲ್ಲದೆ ದುಡ್ಡು ತಂದುಕೊಡುವ FD , LIC ಇನ್ಶೂರೆನ್ಸ್ ಪಾಲಿಸಿ ಅಥವಾ PPF ತರಹದ ಅಥವಾ gold ಅಥವಾ ರಿಯಲ್ ಎಸ್ಟೇಟ್ನಲ್ಲಿ ತಮ್ಮ ಹಣವನ್ನು ಇನ್ವೆಸ್ಟ್ ಮಾಡುತ್ತಾರೆ. LIC ,ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ಗಳು ಇದೆ ಮಧ್ಯಮ ವರ್ಗದ ಜನರ ಹಣವನ್ನು ಶೇರ್ ಮಾರ್ಕೆಟ್ನಲ್ಲಿ ತೊಡಗಿಸಿ ಸಾಕಷ್ಟು ಹಣವನ್ನು ಸಂಪಾದಿಸುತ್ತಿದ್ದಾರೆ. ಹಾಗಾದರೆ ಈ ಶೇರ್ ಮಾರ್ಕೆಟ್ ನಲ್ಲಿ ದುಡ್ಡು ಮಾಡುವುದು ಸುಲಭವ? ಖಂಡಿತಾ ಸುಲಭವಲ್ಲ. ಈ ಶೇರ್ ಮಾರ್ಕೆಟ್ ನಲ್ಲೂ ಕೂಡ ೯೫% ಜನರು ಹಣವನ್ನು ಕಳೆದುಕೊಳ್ಳುತ್ತಾರೆ. ಹಾಗೆ ನೋಡಿದರೆ ಎಲ್ಲ ಕ್ಷೇತ್ರಗಳಲ್ಲೂ ಸಕ್ಸಸ್ ರೇಟ್ ಇರುವುದು ಕೇವಲ ೫% ಅಥವಾ ೧೦%. ಎಲ್ಲರೂ ಶಾರುಖ್ ಖಾನ್ ಆಗಲು ಸಾಧ್ಯವಿಲ್ಲ ಅಥವಾ ಎಲ್ಲರೂ ನರೇಂದ್ರ ಮೋದಿ ಆಗಲೂ ಸಾಧ್ಯವಿಲ್ಲ. ದೇಶಕ್ಕೆ ಒಬ್ಬನೇ ಪ್ರಧಾನ ಮಂತ್ರಿ ಮತ್ತು ಒಬ್ಬನೇ ಸೂಪರ್ಸ್ಟಾರ್ ಮತ್ತು ಹಾಗೆಯೇ ಒಂದು ಕ್ರಿಕೆಟ್ ಟೀಮ್ನಲ್ಲಿ ಆಡುವುದು ಕೇವಲ ೧೧ ಜನ ಮಾತ್ರ.

ಹಾಗೆಯೇ ಶೇರ್ ಮಾರ್ಕೆಟ್ ನಲ್ಲಿ ದುಡ್ಡು ಮಾಡಬೇಕಾದರೆ ಸಾಕಷ್ಟು ಅಧ್ಯಯನ ಮುಖ್ಯ ಮತ್ತು ಮಾರ್ಕೆಟ್ ಏರಳಿತದ ಬಗ್ಗೆ ಸಾಕಷ್ಟು ಜ್ಞಾನ ಮತ್ತು ತಿಳುವಳಿಕೆ ಅತ್ಯಗತ್ಯ. ಹೌದು ಶೇರ್ ಮಾರ್ಕೆಟ್ ಎಂಬುದು ಒಂದು ಮಾಯಾಜಾಲ ಮತ್ತು ಅದನ್ನು ಭೇದಿಸುವವನೇ ನಿಜವಾದ ಮಾಂತ್ರಿಕ.

Comments

Popular posts from this blog

ಪುಷ್ಪಕ ವಿಮಾನ ಮತ್ತು ವಿಂಡ್ಸರ್ ಮ್ಯಾನರ್ — ಬೆಂಗಳೂರಿನ ಮೂಕ ಕಥೆ

ಸಾಮಾನ್ಯರ ಜೀವನದಲ್ಲಿ ಅಸಾಧಾರಣ ಬದಲಾವಣೆ ತಂದ ತಂತ್ರಜ್ಞಾನದ ಆಧುನಿಕ ವ್ಯವಸ್ಥೆ

PVR Director's Cutನಲ್ಲಿ ಕಾಂತಾರ ಚಾಪ್ಟರ್ ೧