ಇನ್ಫೋಸಿಸ್ನಲ್ಲಿ ಹೂಡಿಕೆ ಮಾಡಲು ಇದು ಸಕಾಲವೇ?


ಇನ್ಫೋಸಿಸ್ ಷೇರುಗಳು ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಏರಳಿತ ಕಂಡಿದೆ. ಇದು ಕಳೆದ ವರ್ಷ ಎಲ್ಲ analystಗಳ ನೆಚ್ಚಿನ IT ಸ್ಟಾಕ್ ಕೂಡ ಆಗಿತ್ತು. ಪ್ರತಿ ಷೇರಿನ ಬೆಲೆ ಗರಿಷ್ಟ 847 ರೂಪಾಯಿಗಳ ತನಕ ಏರಿಕೆ ಕಂಡಿತ್ತು. ತ್ರೈಮಾಸಿಕ ಫಲಿತಾಂಶಗಳು ಮತ್ತು ಆದಾಯ ಪ್ರೊಜೆಕ್ಷನ್ ಕೂಡ ಚೆನ್ನಾಗಿ ಇತ್ತು. ಆದರೆ ಕಂಪನಿಯ ಕೆಲವು ಅನಾಮಧೇಯ ಉದ್ಯೋಗಿಗಳು ಭಾರತ ಮತ್ತು ಅಮೇರಿಕಾದ ಷೇರು ಮಾರುಕಟ್ಟೆಗೆ  whistleblower ಕಂಪ್ಲೇಂಟ್ ಮಾಡಿದ್ದರಿಂದ, ಇನ್ಫೋಸಿಸ್ನ ಷೇರು ಬೆಲೆ ಕನಿಷ್ಟ ಮೊತ್ತ ಅಂದರೆ 635 ರೂಪಾಯಿಗಳಿಗೆ ಇಳಿಕೆ ಕಂಡು, ಹೂಡಿಕದಾರರ ನಂಬಿಕೆಯನ್ನೇ ಕಳೆದುಕೊಂಡಿತ್ತು. ಆದರೆ ಕ್ರಮೇಣ ಷೇರಿನ ಬೆಲೆ ಏರಿಕೆ ಕಂಡು ಇಂದು 740 ರುಪಾಯಿಗೆ ಬಂದು ನಿಂತಿದೆ.

೧೦ January ,೨೦೨೦ ರಂದು, ಇನ್ಫೋಸಿಸ್ನ ಮೂರನೇ ತ್ರೈಮಾಸಿಕ ಫಲಿತಾಂಶ ಹೊರಬಂದಿದೆ. ಮಾರುಕಟ್ಟೆ ಪಂಡಿತರ ನಿರೀಕ್ಷೆಯನ್ನು ಮೀರಿದ ಫಲಿತಾಂಶ ಬಂದಿದೆ. ಹಾಗಾದರೆ ಇನ್ಫೋಸಿಸ್ ನಲ್ಲಿ ಹೂಡಿಕೆ ಮಾಡಲು ಇದು ಸಕಾಲವೇ?

ಆದರೆ ಇನ್ಫೋಸಿಸ್ನ whistleblower ಕಂಪ್ಲೇಂಟ್ ಇನ್ನು ಇತ್ಯರ್ಥವಾಗಿಲ್ಲ. ಹೂಡಿಕೆದಾರರಿಗೆ ಇನ್ಫೋಸಿಸ್ನ ವ್ಯವಹಾರಗಳು ಅಂತಹ ಕ್ಲಾರಿಟಿ ಕೊಟ್ಟಿಲ್ಲ ಅಂತಾನೆ ಹೇಳಬಹುದು. ಇನ್ಫೋಸಿಸ್ನ ಸಮಸ್ಯೆ ಬೂದಿ ಮುಚ್ಚಿದ ಕೆಂಡದಂತೆ ಇದೆ. ಇನ್ಫೋಸಿಸ್ ಈ ಎಲ್ಲ ಸಮಸ್ಯೆಗಳಿಂದ ಹೊರಬಂದರೆ, ಖಂಡಿತಾ ಮತ್ತೊಮ್ಮೆ ಹೂಡಿಕದಾರರ ನೆಚ್ಚಿನ ಸ್ಟಾಕ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ಫೋಸಿಸ್ ಏಷ್ಯಾದ ಪ್ರಮುಖ IT ಕಂಪೆನಿಗಳಲೊಂದು. ಖಂಡಿತವಾಗಿಯೂ ತನ್ನೆಲ್ಲ ಸಮಸ್ಯೆಯಿಂದ ಹೊರಬರುತ್ತದೆ ಎನ್ನುವ ಆಶಯ ಹೂಡಿಕೆದಾರರಲ್ಲಿದೆ.

Comments

Popular posts from this blog

ಪುಷ್ಪಕ ವಿಮಾನ ಮತ್ತು ವಿಂಡ್ಸರ್ ಮ್ಯಾನರ್ — ಬೆಂಗಳೂರಿನ ಮೂಕ ಕಥೆ

ಸಾಮಾನ್ಯರ ಜೀವನದಲ್ಲಿ ಅಸಾಧಾರಣ ಬದಲಾವಣೆ ತಂದ ತಂತ್ರಜ್ಞಾನದ ಆಧುನಿಕ ವ್ಯವಸ್ಥೆ

PVR Director's Cutನಲ್ಲಿ ಕಾಂತಾರ ಚಾಪ್ಟರ್ ೧