ಕುದರೆಮುಖ ರಾಷ್ಟ್ರೀಯ ಉದ್ಯಾನವನ

ಕುದರೆ ಮುಖ ಆಕಾರದ ಪರ್ವತ

ಕುದರೆಮುಖ ರಾಷ್ಟ್ರೀಯ ಉದ್ಯಾನವನ, ಕರ್ನಾಟಕದ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದೆ. ಇದು ಬೆಂಗಳೂರಿಂದ ಸುಮಾರು ೩೩೦ km ದೂರದಲ್ಲಿ ಇದೆ. ಇದು ಸಂರಕ್ಷಿತ ಅರಣ್ಯ ಪ್ರದೇಶವಾದರಿಂದ ಇಲ್ಲಿ ಖಾಸಗಿ ಹೋಂಸ್ಟೇ ಅಥವಾ ರೆಸಾರ್ಟ್ಗಳಿಗೆ ಅವಕಾಶವಿಲ್ಲ. ಇಲ್ಲಿ ಪ್ರವಾಸಿಗರು ಉಳಿಯಬೇಕೆಂದರೆ, ಅರಣ್ಯ ಇಲಾಖೆಯ ಜಂಗಲ್ lodges ಅಂಡ್ ರೆಸಾರ್ಟ್ಸ್ ನಡೆಸುವ ಭಗವತಿ ನೇಚರ್ ಕ್ಯಾಂಪ್ ಇದೆ. ಭಗವತಿ ನೇಚರ್ ಕ್ಯಾಂಪ್ನಲ್ಲಿ ಟೆಂಟ್ ಹೌಸ್,ವುಡನ್ cottages ಮತ್ತು dormitory ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಇದೆ. ಭಗವತಿ ನೇಚರ್ ಕ್ಯಾಂಪ್ನಲ್ಲಿ ಉಳಿದುಕೊಳ್ಳಬೇಕೆಂದರೆ, ಜಂಗಲ್ lodges ಮತ್ತು ರೆಸಾರ್ಟ್ಸ್ ವೆಬ್ಸೈಟ್ ಅಲ್ಲಿ ಬುಕ್ ಮಾಡಬಹುದು. ಕುದರೆಮುಖ ಸಮೀಪ ಸ್ಥಳಗಳಾದ ಸಂಸೆ ಮತ್ತು ಕಳಸ ಗಳಲ್ಲಿ ಖಾಸಗಿ ರೆಸಾರ್ಟ್ಸ್ ಮತ್ತು ಹೋಂಸ್ಟೇ ಗಳು ಸಾಕಷ್ಟು ಸಂಖ್ಯೆ ಅಲ್ಲಿ ಸಿಗುತ್ತವೆ. ಕುದರೆಮುಖದಲ್ಲಿ ಚಾರಣಪ್ರಿಯರಿಗೆ ಸಾಕಷ್ಟು ಸಂಖ್ಯೆಯಲ್ಲಿ ಟ್ರೆಕಿಂಗ್ ಮಾಡಲು ಉತ್ತಮ ಪೀಕ್ ಪಾಯಿಂಟ್ ಗಳಿವೆ. ಅವುಗಳಲ್ಲಿ ಕುರಿಂಜಲ್ , ಕ್ಯಾತನಮಕ್ಕಿ ಮತ್ತು ಕುದರೆಮುಖ ಪೀಕ್ ಪಾಯಿಂಟ್ ಪ್ರಮುಖ ಸ್ಥಳಗಳು. ಒಂದು ಕಾಲದಲ್ಲಿ ಕೇಂದ್ರ ಸರ್ಕಾರದ ಅಂಗ ಸಂಸ್ಥೆ ಕುದರೆಮುಖ ಗಣಿಗಾರಿಕೆ ಕಂಪನಿ( KIOCL ) ಇಲ್ಲಿ ಗಣಿಗಾರಿಕೆ ಮಾಡುತ್ತಿದ್ದ ಕಾರಣ(ಈಗ ಗಣಿಗಾರಿಕೆ ನಿಷೇದಿಸಲಾಗಿದೆ), ಇಂದಿಗೂ ಸಹ ಪಾಳು ಬಿದ್ದ ಪೆಟ್ರೋಲ್ ಬಂಕ್, ಕೇಂದ್ರೀಯ ವಿದ್ಯಾಲಯ, post graduate centre , ಆಸ್ಪತ್ರೆ, ಹೋಟೆಲ್, ಉದ್ಯಾನವನ, ಕಾರ್ಮಿಕರು ಮತ್ತು ಕೆಲಸಗಾರರು ಉಳಿದುಕೊಳ್ಳುತ್ತಿದ್ದ ಸುಸಜ್ಜಿತ ಮನೆಗಳನ್ನು ಕಾಣಬಹುದು. ಇದನ್ನು ಈಗ ghost ಟೌನ್ ಎಂದು ಕರೆಯುತ್ತಾರೆ.

ಇಲ್ಲಿ ಚಿತ್ರೀಕರಿಸಿದ ಪ್ರಮುಖ ಕನ್ನಡ ಚಲನಚಿತ್ರಗಳು:: ಪ್ರೇಮಲೋಕ,ರಣಧೀರ,ಬಂಧನ,ನೀ ನನ್ನ ಗೆಲ್ಲಲಾರೆ,ಸಮಯದ ಗೊಂಬೆ,ಮೈನಾ,ಶಾಂತಿ ಕ್ರಾಂತಿ,ಗೀತಾ ಮುಂತಾದವುಗಳು.

Comments

Popular posts from this blog

ಪುಷ್ಪಕ ವಿಮಾನ ಮತ್ತು ವಿಂಡ್ಸರ್ ಮ್ಯಾನರ್ — ಬೆಂಗಳೂರಿನ ಮೂಕ ಕಥೆ

ಸಾಮಾನ್ಯರ ಜೀವನದಲ್ಲಿ ಅಸಾಧಾರಣ ಬದಲಾವಣೆ ತಂದ ತಂತ್ರಜ್ಞಾನದ ಆಧುನಿಕ ವ್ಯವಸ್ಥೆ

PVR Director's Cutನಲ್ಲಿ ಕಾಂತಾರ ಚಾಪ್ಟರ್ ೧